Select Your Language

Notifications

webdunia
webdunia
webdunia
webdunia

ಸತತ 3 ಗಂಟೆಗಳ ಕಾಲ ನಡೆದ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ಅಂತ್ಯ

ಸತತ 3 ಗಂಟೆಗಳ ಕಾಲ ನಡೆದ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ಅಂತ್ಯ
ಬೆಂಗಳೂರು , ಸೋಮವಾರ, 7 ಆಗಸ್ಟ್ 2017 (15:55 IST)
ಐಟಿ ಅಧಿಕಾರಿಗಳಿಗಳು ಸತತ ಮೂರು ಗಂಟೆಗಳ ಕಾಲ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಹೋದರ ಡಿ.ಕೆ. ಸುರೇಶ್ ಜೊತೆ ಡಿಕೆಶಿ ವಿಚಾರಣೆಗೆ ತೆರಳಿದ್ದರು. ಮಧ್ಯಾಹ್ನ 3 ಗಂಟೆವರೆಗೂ ವಿಚಾರಣೆ ನಡೆದಿದೆ. ಬಳಿಕ ಕ್ವೀನ್ಸ್ ರಸ್ತೆಯ ಐಟಿ ಕಚೇರಿಯಿಂದ ಡಿ.ಕೆ. ಶಿವಕುಮಾರ್ ತೆರಳಿದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರಿಂದ ಬಂದು ವಿಚಾರಣೆಗೆ ಹಾಜರಾಗಿದ್ದೇನೆ. ಐಟಿ ಅಧಿಕಾರಿಗಳು ಗೌರವದಿಂದ ನಡೆದುಕೊಂಡಿದ್ದಾರೆ. ಇವತ್ತಿನ ವಿಚಾರಣೆ ಅಂತ್ಯಗೊಂಡಿದೆ. ಅಗತ್ಯಬಿದ್ದರೆ ಮತ್ತೆ ತಿಳಿಸುವುದಾಗಿ ಹೇಳಿದ್ದಾರೆ. ಮತ್ತೆ ನನ್ನನ್ನ ವಿಚಾರಣೆಗೊಳಪಡಿಸುವ ಸಾಧ್ಯತೆ ಇಲ್ಲ ಮತ್ತೆ ಕರೆದರೆ ಹೋಗುತ್ತೇನೆ. ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್ ವಿಚಾರಣೆ ಸಂದರ್ಭದಲ್ಲೇ ಜ್ಯೋತಿಷಿ ದ್ವಾರಕನಾಥ್ ಅವರನ್ನೂ 3 ಗಂಟೆ ವಿಚಾರಣೆ ನಡೆಸಲಾಗಿದೆ. ಇವತ್ತಿಗೆ ಅವರ ವಿಚಾರಣೆ ಸಹ ಅಂತ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಗೆ ಕಿರುಕುಳ ವಿವಾದ: ಹರಿಯಾಣಾ ಬಿಜೆಪಿ ಅಧ್ಯಕ್ಷನ ರಾಜೀನಾಮೆ