ಸದನದಲ್ಲಿ ಎಂದಿನ ಖದರ್ ಇಲ್ಲ, ಡಿಕೆ ಶಿವಕುಮಾರ್ ಲೆಕ್ಕಾಚಾರವೇ ಬೇರೆ

Krishnaveni K
ಗುರುವಾರ, 18 ಡಿಸೆಂಬರ್ 2025 (09:16 IST)
ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಡಿಕೆ ಶಿವಕುಮಾರ್ ಎಂದಿನ ಖದರ್ ತೋರುತ್ತಿಲ್ಲ ಎಂದು ಸ್ವತಃ ವಿಪಕ್ಷ ಬಿಜೆಪಿಯೇ ಕಾಲೆಳೆದಿದೆ. ಡಿಕೆಶಿ ಈ ಬಾರಿ ತಮ್ಮದೇ ಲೋಕದಲ್ಲಿದ್ದಾರೆ.

ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಕಿತ್ತಾಟ ನಡೆಯುತ್ತಿದೆ. ಈ ನಡುವೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ನಡುವೆ ಮೀಟಿಂಗ್ ಗಳು, ಔತಣಕೂಟಗಳು ನಡೆಯುತ್ತಿವೆ. ಬೆಳಗಾವಿ ಅಧಿವೇಶನ ನಡೆಯುತ್ತಿರುವಾಗಲೂ ಇದು ಮುಂದುವರಿದಿದೆ.

ಎಷ್ಟರ ಮಟ್ಟಿಗೆ ಎಂದರೆ ಡಿಕೆ ಶಿವಕುಮಾರ್ ಈ ಬಾರಿ ಅಧಿವೇಶನದಲ್ಲಿ ಕೊಂಚ ಸೈಲೆಂಟ್ ಆದಂತೆ ಕಾಣುತ್ತಿದ್ದಾರೆ. ಮೊನ್ನೆ ಸಿಎಂ ಯಾರು ಎಂಬ ಬಗ್ಗೆ ವಿಪಕ್ಷಗಳು ಸಿದ್ದರಾಮಯ್ಯನವರನ್ನು ಕೆಣಕಿದಾಗಲೂ ಸುಮ್ಮನಿದ್ದರು.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ನಿನ್ನೆಯೂ ಸದನದಲ್ಲಿ ನಡು ನಡುವೆ ತಮ್ಮ ಆಪ್ತ ಶಾಸಕರೊಂದಿಗೇ ಡಿಕೆಶಿ ಮಾತುಕತೆ ನಡೆಸುತ್ತಾ ಕಾಲ ಕಳೆಯುವುದು ಕಂಡುಬಂದಿದೆ. ವಿಶೇಷವಾಗಿ ತಮ್ಮ ಆಪ್ತ ಬಳಗಲದಲ್ಲಿ ಗುರುತಿಸಿಕೊಂಡಿರುವ ನಯನಾ ಮೋಟಮ್ಮ, ಬಾಲಕೃಷ್ಣ ಮಾಗಡಿ, ಸಿಪಿ ಯೋಗೇಶ್ವರ್ ಅವರ ಜೊತೆ ಗಹನವಾಗಿ ಮಾತುಕತೆ ನಡೆಸುತ್ತಿದ್ದಾರೆ. ಹೀಗಾಗಿ ಸದನದಲ್ಲೂ ಡಿಕೆಶಿ  ಲೆಕ್ಕಾಚಾರವೇ ಬೇರೆಯೇನೋ ಎಂಬ ಅನುಮಾನ ಮೂಡಿಸುವಂತಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments