Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಕಾರಿಗೆ ಮುತ್ತಿಗೆ

ಡಿಕೆ ಶಿವಕುಮಾರ್ ಕಾರಿಗೆ ಮುತ್ತಿಗೆ
bagalakote , ಭಾನುವಾರ, 18 ಜುಲೈ 2021 (19:49 IST)
ಸದಾಶಿವ ವರದಿ ಜಾರಿಗೆ ಮಾಡುವಂತೆ ಹಾಗೂ ಡಿ ಕೆ ಶಿ ಅವರು ಅಸ್ಪೃಶ್ಯರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ,ರಾಜ್ಯ ಮಾದಿಗ ಮಹಾಸಭಾ ವತಿಯಿಂದ ಬಾಗಲಕೋಟ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಡಿ ಕೆ ಶಿವಕುಮಾರ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
 ಮಾದಿಗ ಮಹಾಸಭಾ ಮುಧೋಳ ತಾಲೂಕಿನ ಅಧ್ಯಕ್ಷರಾದ ಸುನೀಲ ಕಂಬೋಗಿ ಅವರ ನೇತೃತ್ವದಲ್ಲಿ ಡಿ ಕೆ ಶಿವಕುಮಾರ ಹೋಗುತ್ತಿರುವ ವಾಹನಕ್ಕೆ ಅಡ್ಡಲಾಗಿ ನಿಂತು,ಕಾರು ನಿಲ್ಲಿಸಿ,ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾದಿಗ ಮಹಾಸಭಾ ಮುಖಂಡರು ಮಾತನಾಡಿ,ಕಾಂಗ್ರೆಸ್ ಪಕ್ಷಕ್ಕೆ ಮತ ಬ್ಯಾಂಕವಾಗಿ ಸಮಾಜದವರನ್ನು ಬಳಸಿಕೊಳ್ಳುತ್ತಿರಿ.ಆದರೆ ಯಾವುದೇ ಸೌಲಭ್ಯ ನೀಡುವುದಿಲ್ಲ.ಪಕ್ಷದ ಪದಾಧಿಕಾರಿಗಳು ಸೇರಿದಂತೆ ಇತರ ಹುದ್ದೆಗಳು ನೀಡುವುದಿಲ್ಲ.ಕೇವಲ ಮತಕ್ಕಾಗಿ ಮಾತ್ರ ಸಿಮೀತವಾಗಿದೆ. ಮಾದಿಗ ಮೀಸಲಾತಿ ಹೋರಾಟ ಬಗ್ಗೆ ನಿಮ್ಮ ನಿಲುವು ಏನು. ಈ ಬಗ್ಗೆ ನೀವು ಸ್ಪಷ್ಟಪಡಿಸಬೇಕು ಎಂದರು ಡಿ ಕೆ ಶಿವಕುಮಾರ ಅವರ ಮುಂದೆ ತಮ್ಮ ಮನವಿ ನೀಡಿದರು.ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ ಮಾತನಾಡಿ,ನಾನು ಯಾವುದೇ ಜಾತಿ ಪಂಗಡ ಮಾಡಲ್ಲ.ಮೀಸಲಾತಿ  ಸಿಗಬೇಕು ಎಂಬುದು ನಮ್ಮದು ವಾದವಾಗಿದೆ.ನೀವು ಕಾಂಗ್ರೆಸ್ ಪಕ್ಷದವರು,ನಿಮ್ಮ ಎಲ್ಲಾ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ.ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಎಲ್ಲಾ ಜಾತಿಗೆ ಸಮಾನವಾಗಿ ನೋಡಲಾಗಿವುದು.ಈ ಬಗ್ಗೆ ಎಲ್ಲಾ ವಿಚಾರ ಮಾಡಿ ಚರ್ಚೆ ನಡೆಸಿ,ಸರಿಪಡಿಸಲಾಗುವುದು ಎಂದು ಡಿ ಕೆ ಶಿವಕುಮಾರ ಭರವಸೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಮಠದ ವಿದ್ಯಾರ್ಥಿ ಶವ ಹೊಂಡದಲ್ಲಿ ಪತ್ತೆ!