Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
bangalore , ಗುರುವಾರ, 21 ಜುಲೈ 2022 (15:38 IST)
EDಯಿಂದ ಸೋನಿಯಾ ಗಾಂಧಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದ್ದು, ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಕಿಡಿಕಾರಿದ್ದಾರೆ. ಗಾಂಧಿ ಪರಿವಾರದ ಮೇಲೆ ಅನಗತ್ಯವಾಗಿ ಕೇಸ್​ ದಾಖಲು ಮಾಡಲಾಗ್ತಿದೆ. ರಾಹುಲ್​​​ ಗಾಂಧಿಯವರನ್ನು ED 50 ಗಂಟೆ ವಿಚಾರಿಸಿದ್ರು. ಸುಳ್ಳು ಕೇಸ್​​ ದಾಖಲಿಸಿ ತನಿಖೆ ಮಾಡಲಾಗ್ತಿದೆ. ತನಿಖೆಯ ವಿಡಿಯೋ ರಿಲೀಸ್​​ ಮಾಡಲಿ ನೋಡೋಣಾ ಎಂದು ಸವಾಲ್​​ ಹಾಕಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ತಪ್ಪಿ ಕಂಡು ಬಂದಿದೆಯಾ? ಹೀಗಾಗಿ ನಾವು ಇಂದು ED ವಿಚಾರಣೆ ವಿರೋಧಿಸಿ ಪ್ರತಿಭಟನೆ ಮಾಡ್ತಾ ಇದೀವಿ ಎಂದ್ರು. ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದ್ರು. ಒಂದೇ ಸಮುದಾಯವನ್ನು ನಂಬಿಕೊಂಡು ಹೋದ್ರೆ ಸಿಎಂ ಆಗಲ್ಲ ಎಂಬ ಜಮೀರ್​ ಅಹ್ಮದ್​​​​​​ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಜಮೀರ್​ಗೆ ಎಲ್ಲಾ ಉತ್ತರ ಕೊಡಲು ನಾನು ರೆಡಿ ಇಲ್ಲ. ಪ್ರತಿಯೊಬ್ಬರು ಕಾಂಗ್ರೆಸ್​​​ ಪಾರ್ಟಿ ಲೈನ್​ನಲ್ಲೇ ಹೋಗಬೇಕು. ಕಾಂಗ್ರೆಸ್​​​ ಪಕ್ಷಕ್ಕೆ ಎಲ್ಲಾ ಸಮುದಾಯ ಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯವರಿಗೆ ಭಯವಿದೆ ಆದ್ರಿಂದ GST ಏರಿಕೆ ಮಾಡ್ತಿ ಪಿಕ್ ಪ್ಯಾಕೇಟ್ ಮಾಡ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪಗಳಿವೆ. ಇವುಗಳನ್ನು ಡೈವರ್ಟ್ ಮಾಡಲು ಕಾಂಗ್ರೆಸ್​​​​ಗೆ ಕಿರುಕುಳ ನೀಡುತ್ತಿದ್ದಾರೆ‌ ಎಂದು ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮಳೆ ಅಬ್ಬರ...!! ಎಲ್ಲೆಲ್ಲಿ ಎಷ್ಟು ಮಳೆ