Publish Date: Sun, 21 May 2023 (18:56 IST)
Updated Date: Sun, 21 May 2023 (19:09 IST)
ಡೋಂಟ್ ಡಿಸ್ಟರ್ಬ್ ಎಂದು ಸಚಿವ ಎಂ.ಬಿ.ಪಾಟೀಲ್ ಗೆ ಡಿಕೆ ಶಿವಕುಮಾರ್ ಗೆ ಗದರಿದ್ದಾರೆ.ಇಂದಿರಾ ಗಾಂಧಿ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಡಿಕೆಶಿವಕುಮಾರ್ ಬಾಷಣ ಮಾಡ್ತಾಯಿದ್ರು.ಈ ವೇಳೆ ಸಿದ್ದರಾಮಯ್ಯ ಜೊತೆ ಎಂ ಬಿ ಪಾಟೀಲ್ ಮಾತನಡುತ್ತಿದ್ರು ಅದನ್ನು ಗಮನಿಸಿದ ಡಿಕೆಶಿ ಡೋಂಟ್ ಡಿಸ್ಟರ್ಬ್ ಎಂದು ಗದರಿಸಿದರು. ಅದಕ್ಕೆ ಸಮಜಾಯಿಷಿ ನೀಡಲು ಮುಂದಾದ ಎಂಬಿ ಪಾಟೀಲ್ ಇದಕ್ಕೆ ಡಿಕೆಶಿವಕುಮಾರ್ ಮಾತನಡಿ ಇರಲಿ ಡೋಂಟ್ ಡಿಸ್ಟರ್ಬ್ ಇಲ್ಲಿ ಕೆಲವು ಹೊಸ ವಿಚಾರ ಹೇಳುತ್ತಿದ್ದೇನೆ ಎಂದರು ಇದರಿಂದ ಮುಜುಗರಕ್ಕೆ ಒಳಗಾಗಿ ಸುಮ್ಮನೆ ಎಂ ಬಿ ಪಾಟೀಲ್ ಕುಳಿತರು.