Select Your Language

Notifications

webdunia
webdunia
webdunia
webdunia

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಬಲಿಯಾಗಿದ್ದ ದಿವ್ಯಾಂಶಿ ಕಿವಿಯೋಲೆ ಎಗರಿಸಿದ್ದವ ಬಲೆಗೆ, ಆದರೆ ತಾಯಿಯ ಕೋರಿಕೆ ಈಡೇರಲೆ ಇಲ್ಲ

ಬೆಂಗಳೂರು ಎಂ ಚಿನ್ನಸ್ವಾಮಿ ಕಾಲ್ತುಳಿತ

Sampriya

ಬೆಂಗಳೂರು , ಭಾನುವಾರ, 3 ಆಗಸ್ಟ್ 2025 (13:08 IST)
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 13 ವರ್ಷದ ದಿವ್ಯಾಂಶಿ  ಮೈಮೇಲಿದ್ದ ಚಿನ್ನಾಭರಣ ಕಳವು ಸಂಬಂದ ಅವರ ತಾಯಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಇದೀಗ ಚಿನ್ನಾಭರಣ ಕಳವು ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸ್ಟಾಲಿನ್(32) ಎಂದು ಗುರುತಿಸಲಾಗಿದೆ. ವಿವೇಕನಗರ ಮಯಾಬಜಾರ್‌ನ ನಿವಾಸಿಯಾಗಿದ್ದಾನೆ. ಈತ ಬೌರಿಂಗ್ ಆಸ್ಪತ್ರೆಯ ಶವವಾಗಾರದಲ್ಲಿ ಅರೆಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ದಿವ್ಯಾಂಶಿಯ ಮರಣೋತ್ತರ ಪರೀಕ್ಷೆಯ ವೇಳೆ ಮೈಮೇಲಿದ್ದ ಚಿನ್ನವನ್ನು ಕಳವು ಮಾಡಿದ್ದು. ಈ ಸಂಬಂಧ ಆಕೆಯ ತಾಯಿ ಈಚೆಗೆ ಠಾಣೆ ಮೆಟ್ಟಿಲೇರಿದ್ದರು. 

ಆಕೆ ಹಾಕಿಕೊಂಡಿದ್ದ ಕಿವಿಯೋಲೆ ಆಕೆಯ ಮಾವ ಕೊಟ್ಟಿದ್ದು, ಅದರ ಮೇಲೆ ಆಕೆಗೆ ವಿಶೇಷವಾದ ಪ್ರೀತಿಯಿತ್ತು. ನಮಗೆ ಆ ಕಿವಿಯೋಲೆ ಬೇಕೆಂದು ದಿವ್ಯಾಂಶಿ ತಾಯಿ ಅಶ್ವಿನಿ ಅವರು ಜುಲೈ 24ರಂದು ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಕಳವು ಮಾಡಿದ್ದ ಚಿನ್ನಾಭರಣ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೆಟ್ರೊ ಹಳದಿ ಮಾರ್ಗ ಲೋಕಾರ್ಪಣೆಗೆ ದಿನಗಣನೆ: ಪ್ರಧಾನಿ ಮೋದಿಯಿಂದ ಗ್ರೀನ್‌ಸಿಗ್ನಲ್‌