ವರಕವಿ ಬೇಂದ್ರೆ ಅವರಿಗೆ ಅಗೌರವ ಸೂಚಿಸುತ್ತಿರೋದಕ್ಕೆ ಆಕ್ರೋಶಗೊಂಡ ಸಾಹಿತಿಗಳು, ಬೇಂದ್ರೆ ಅಭಿಮಾನಿಗಳು ಬೀದಿಗೆ ಇಳಿದು ಪ್ರತಿಭಟನೆ ಕೈಗೊಂಡಿದ್ದಾರೆ.
ಸಾಧಕರಿಗೆ ಕೊಡುತ್ತಿದ್ದ ಅಂಬಿಕಾತನಯದತ್ತ ಪ್ರಶಸ್ತಿಯನ್ನು ಯತ್ತಾಸ್ಥಿತಿ ಮುಂದುವರೆಸಿಕೊಂಡು ಹೋಗಬೇಕು. ಹೀಗಂತ ಧಾರವಾಡದ ಬಾಂಡ್ಸ್ ಸದಸ್ಯರು ಮತ್ತು ನಾಗರಿಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೇಂದ್ರೆ ಭವನದಲ್ಲಿ ಪ್ರತಿ ವರ್ಷ ಸಾಧಕರಿಕೆ ಕೊಡುತ್ತಿದ್ದ ಅಂಬಿಕಾತನಯದತ್ತ ಪ್ರಶಸ್ತಿಗೆ ಮೊದಲು 1 ಲಕ್ಷ ನಗದು ಹಣ ನಿಗದಿ ಪಡಿಸಿದ್ದರು. ಆದರೆ ಈಗ ಅದನ್ನು ಸರಕಾರ 10 ಸಾವಿರಕ್ಕೆ ಇಳಿಸಿದೆ. ಇದು ವರಕವಿ ಬೇಂದ್ರೆಯವರಿಗೆ ಅಗೌರವ ನೀಡಿದಂತೆ.
ಪ್ರಶಸ್ತಿ ಮೊತ್ತವನ್ನು ಹಿಂದಿನಂತೆ 1 ಲಕ್ಷ ಹಣವನ್ನು ನಿಗದಿ ಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು.