Publish Date: Mon, 20 Feb 2023 (12:09 IST)
Updated Date: Mon, 20 Feb 2023 (12:12 IST)
ಮಡಿಕೇರಿ : ನಗರದಲ್ಲಿ ಇರುವ ಪೀಠೋಪಕರಣಗಳ ಅಂಗಡಿಯೊಂದರಲ್ಲಿ ಸೋಮವಾರ ನಸುಕಿನ ವೇಳೆ ಬೆಂಕಿ ಕಾಣಿಸಿಕೊಂಡಿದೆ.
ಸತತ 7 ಗಂಟೆಗಳಿಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಇನ್ನೂ ಅಗ್ನಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ನಗರದ ಕೈಗಾರಿಕಾ ಬಡಾವಣೆಯಲ್ಲಿ ಪ್ರಶಾಂತ್ ಫರ್ನಿಚರ್ ಅವರ ದಾಸ್ತಾನು ಮಳಿಗೆಗೆ ಸೋಮವಾರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಗಿಲಿಗೆ ಎಷ್ಟು ತೀವ್ರವಾಗಿದೆ ಎಂದರೆ 30 ಲೋಡ್ನಷ್ಟು ನೀರು ಖಾಲಿಯಾದರೂ ಬೆಂಕಿ ಇನ್ನೂ ಉರಿಯುತ್ತಿದೆ.
ಸ್ಥಳಕ್ಕೆ ಬಂದಿರುವ ಪೊಲೀಸರು ಕೈಗಾರಿಕಾ ಬಡಾವಣೆಯ ಕೋಹಿನೂರ್ ಜಂಕ್ಷನ್ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರವನ್ನು ಬಂದ್ ಮಾಡಿದ್ದಾರೆ.