ರಾಜ್ಯ ಬಜೆಟ್ ನಲ್ಲಿ ಸಾರಿಗೆ ನೌಕರರಿಗೆ ಮತ್ತೆ ನಿರಾಸೆಯಾಗಿದೆ.ರಾಜ್ಯ ಬಜೆಟ್ ಮಂಡನೆ ಬಳಿಕ ಸರ್ಕಾರದ ವಿರುದ್ಧ ಮತ್ತಷ್ಟು ಸಾರಿಗೆ ನೌಕರರು ಕೆರಳಲಿದ್ದಾರೆ.
ಈ ಬಾರಿ ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಸಾರಿಗೆ ನೌಕರರು ಕರೆ ನೀಡಿದ್ದು,ಮತ್ತೆ ಮರುಕಳಿಸುತ್ತ ೨೦೨೧ ರ ಸಾರಿಗೆ ನೌಕರರ ಬೃಹತ್ ಮುಷ್ಕರದ ಪರಿಸ್ಥಿತಿ ಉಂಟಾಗಿದೆ.ಚುನಾವಣಾ ಬೆನ್ನಲ್ಲೆ ಪದೇ ಪದೇ ಸರ್ಕಾರಕ್ಕೆ ಸಾರಿಗೆ ನೌಕರರು ಬಿಸಿ ತುಪ್ಪವಾಗ್ತಿತ್ತಿದ್ದಾರೆ.ಮಾರ್ಚ್ ೧ ರಿಂದ ಸಾರಿಗೆ ನೌಕರರು ಪ್ರತಿಭಟನೆ ಮಾಡಲಿದ್ದಾರೆ.
ಪ್ರಮುಖ ಬೇಡಿಕೆಗಳೊಂದಿಗೆ ಮತ್ತೆ ಸಾರಿಗೆ ನೌಕರರು ಬೀದಿಗಿಳಿಯಲು ನಿರ್ಧಾರ ಮಾಡಿದ್ದಾರೆ.
ಈ ಬಾರಿ ಕುಟುಂಬ ಸಮೇತ ಸಾರಿಗೆ ನೌಕರರು ಬೀದಿಗಿಳಿಯಲ್ಲಿದ್ದಾರೆ.೭ ನೇ ವೇತನ ಆಯೋಗಕ್ಕೆ ಒತ್ತಾಯಿಸಿ ಸಾರಿಗೆ ನೌಕರರು ರಸ್ತೆಗಿಳಿಯಲ್ಲಿದ್ದಾರೆ.ಮಾರ್ಚ್ 1 ರಿಂದ ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.ಕುಟುಂಬ ಸಮೇತರಾಗಿ ಫ್ರೀಡಂಪಾರ್ಕ್ ನಲ್ಲಿ ಕೂತು ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ