Publish Date: Thu, 05 Oct 2023 (16:00 IST)
Updated Date: Thu, 05 Oct 2023 (16:44 IST)
ನನ್ನಂತ ಹಿಂದೂಗಳು ಯಾರೂ ಮುಸುಕು ಹಾಕಿಕೊಂಡು ಹೋಗಲ್ಲ, ರಾಮಲಿಂಗಾ ರೆಡ್ಡಿ ಅಂತ ಹಿಂದೂಗಳು ಮುಸುಕು ಹಾಕಿಕೊಂಡು ಹೋಗಬಹುದು ಅಂತ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.ಹಿಂದೂ ಅಥವಾ ಇನ್ನೊಂದು ಮತ್ತೊಂದು ಅನ್ನೋ ಪ್ರಶ್ನೆ ಬರಲ್ಲ.ಶಿವಮೊಗ್ಗದಲ್ಲಿ ಗಲಾಟೆ ಆಗಿದೆ.ಯಾರೆ ಇದ್ರೂ ಕ್ರಮ ಕೈಗೊಳ್ಳಿ ಅಂತ ಹೇಳಿದ್ದೆ.ಯಾವುದೇ ಪಕ್ಷದವರಿದ್ರೂ ಕ್ರಮ ಕೈಗೊಳ್ಳಬೇಕು.ಪುಲಕೇಶಿ ನಗರದಲ್ಲಿ ಕೂಡ ಕ್ರಮಕೈಗೊಳ್ಳಿ ಅಂತ ಹಿಂದೆ ಹೇಳಿದ್ದೆ.ಹಿಂದೆ ನಾನು ಗೃಹ ಮಂತ್ರಿ ಆಗಿದ್ದಾಗ ಎಲ್ಲರ ಮೇಲೆ ಕ್ರಮ ತೆಗೆದುಕೊಂಡಿದ್ದೇನೆ.ಕೆಲವರಮಾತಿಗೆ ಬೆಲೆ ಕೊಡೋದು ಬೇಡ.ಈಶ್ವರಪ್ಪ, ಯತ್ನಾಳ್, ಸಿ.ಟಿ ರವಿ ಇವರ ಮಾತಿಗೆ ಹೆಚ್ಚು ಒತ್ತು ಕೊಡೋದು ಬೇಡ.ಯಾರೇ ಘಟನೆಯಲ್ಲಿ ಭಾಗಿಯಾಗಿದ್ರೂ ಮಟ್ಟ ಹಾಕುವ ಕೆಲಸ ಮಾಡಬೇಕು.ನಾನು ನಿನ್ನೆ ಅದನ್ನೇ ಹೇಳಿದ್ದೆ ಹೊರತು, ಬೇರೆ ಏನನ್ನೂ ಹೇಳಲಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿ ಸತ್ಯ ಶೋಧನಾ ಸಮಿತಿ ಪ್ರವಾಸ ವಿಚಾರವಾಗಿ ಸತ್ಯ ಶೋಧನಾ ಸಮಿತಿ ಮಾಡಲು ಸಮಿತಿ ಹೋಗಿದ್ದಾರೆ.ಅದನ್ನ ತಪ್ಪು ಅಂತ ನಾನು ಹೇಳಲ್ಲ.ಹಿಂದೆ ನಾವು ಕೂಡ ಹಲವು ಘಟನೆಗಳು ನಡೆದಾಗ ಸಮಿತಿ ಹೋಗಿದ್ದೆವು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.