Publish Date: Tue, 18 Jul 2017 (10:00 IST)
Updated Date: Tue, 18 Jul 2017 (10:03 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳನ್ನು ಹೊರಗೆಳೆದು ವಿವಾದಕ್ಕೆ ಗುರಿಯಾದ ಡಿಐಜಿ ರೂಪಾಗೆ ಸ್ವತಃ ಪತಿ ಹಾಗೂ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ಬೆಂಬಲ ನೀಡಿದ್ದಾರೆ.
ಆಹಾರ ಮತ್ತು ಸರಬರಾಜು ಇಲಾಖೆಯ ಕಾರ್ಯದರ್ಶಿಯಾಗಿರುವ ಮನೀಶ್ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪತ್ನಿ ರೂಪಾರನ್ನು ಕಚೇರಿಗೆ ಬಂದು ಭೇಟಿ ಮಾಡಿದ್ದಲ್ಲದೆ, ಧೈರ್ಯ ತುಂಬಿದ್ದಾರೆ. ಅಲ್ಲದೆ ಇಂತಹದ್ದೆಲ್ಲಾ ಸರ್ಕಾರಿ ಇಲಾಖೆಯಲ್ಲಿ ಸಾಮಾನ್ಯ ಎಂದು ಸಮಾಧಾನಿಸಿದ್ದಾರೆ ಎನ್ನಲಾಗಿದೆ.
ರೂಪಾ ವರ್ಗಾವಣೆ ಬೆನ್ನಲ್ಲೇ ಅವರಿಗೆ ವಿಪಕ್ಷ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ರೂಪಾ ಪರವಾಗಿ ಅಭಿಯಾನ ಆರಂಭವಾಗಿದೆ. ವಿಶೇಷವೆಂದರೆ ತಮ್ಮ 16 ವರ್ಷಗಳ ಸೇವಾವಧಿಯಲ್ಲಿ ರೂಪಾ 25 ನೇ ಬಾರಿ ವರ್ಗಾವಣೆಗೊಂಡಿದ್ದಾರೆ. ಅಲ್ಲದೆ, ಕಾರಾಗೃಹ ಇಲಾಖೆಗೆ ಬಂದ ಕೇವಲ 25 ದಿನದಲ್ಲಿ ವರ್ಗಾವಣೆಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ