Publish Date: Tue, 18 Jul 2017 (09:47 IST)
Updated Date: Tue, 18 Jul 2017 (09:49 IST)
ಲಕ್ನೋ: 2007 ರ ಟಿ20 ವಿಶ್ವಕಪ್ ಫೈನಲ್ ನ ಕೊನೆಯ ಓವರ್ ನ ಹೀರೋ ಟೀಂ ಇಂಡಿಯಾ ಕ್ರಿಕೆಟಿಗ ಜೋಗಿಂದರ್ ಶರ್ಮಾ ತಂದೆಗೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಇರಿದು ಹಣದೊಂದಿಗೆ ಪರಾರಿಯಾಗಿದ್ದಾರೆ.
ಸ್ವಂತ ಬೇಕರಿ ಅಂಗಡಿಯೊಂದನ್ನು ನಡೆಸುತ್ತಿರುವ ಜೋಗಿಂದರ್ ಶರ್ಮಾ ತಂದೆ ಓಂ ಪ್ರಕಾಶ್ ಶರ್ಮಾ ರಾತ್ರಿ ಅಂಗಡಿ ಮುಚ್ಚಿ ಬಾಗಿಲು ಹಾಕಿ ಮನೆಗೆ ತೆರಳಬೇಕೆನ್ನುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ತೀವ್ರ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.
ಬೇಕರಿಗೆ ಬಂದಿದ್ದ ದುಷ್ಕರ್ಮಿಗಳು ತಂಪು ಪಾನೀಯ ಕೊಂಡು ವಾಪಸಾಗಿದ್ದರು. ನಂತರ ರಾತ್ರಿ ಬಾಗಿಲು ಮುಚ್ಚುವ ವೇಳೆಗೆ ವಾಪಸಾಗಿ ಓಂ ಪ್ರಕಾಶ್ ಶರ್ಮಾಗೆ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಲ್ಲದೆ, ಅವರ ಬಳಿಯಿದ್ದ 7,000 ರೂ.ಗಳನ್ನು ಕಿತ್ತು ಪರಾರಿಯಾಗಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ