Publish Date: Sat, 10 Nov 2018 (14:39 IST)
Updated Date: Sat, 10 Nov 2018 (14:42 IST)
ಜನಾರ್ದನ ರೆಡ್ಡಿಗೆ ಲೂಟಿ ಮಾಡು, ಕಳ್ಳತನ ಮಾಡು ಅಂತಾ ನಾವು ಹೇಳಿಕೊಟ್ಟಿದ್ವಾ? ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ರೆಡ್ಡಿ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದಾರೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಕಾಂಗ್ರೆಸ್ ಕರ್ನಾಟಕದಲ್ಲಿ ಪ್ರಬಲವಾಗಿದೆ. ಸಮಾಜ ಛಿದ್ರ ಮಾಡುತ್ತಿರುವವರು ಬಿಜೆಪಿಯವರು ಹೊರತು ನಾವಲ್ಲ ಎಂದರು.
ನಾವು ಸಮಾಜ ಒಗ್ಗೂಡಿಸುತ್ತಿದ್ದೇವೆ. ಸಬ್ ಕಾ ಸಾಥ್, ಸಬ್ ಕಾ ಸಾಥ್ ವಿಕಾಸ್ ಅಂತಾ ಬಾಯಲ್ಲಿ ಮಾತ್ರ ಬಿಜೆಪಿಯವರು ಹೇಳುತ್ತಾರೆ. ಮನುಷ್ಯರನ್ನೇ ದ್ವೇಷ ಮಾಡೋರು ಮತಾಂಧರು. ಬಿಜೆಪಿ ಮನುಷ್ಯರನ್ನು ದ್ವೇಷ ಮಾಡುತ್ತೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಚರಿತ್ರೆ ಓದಿಕೊಳ್ಳದೆ ಮಾತಾಡೋರ ಬಗ್ಗೆ ರಿಯಾಕ್ಟ್ ಮಾಡಲ್ಲ ಎಂದ ಸಿದ್ದರಾಮಯ್ಯ, ಅವನ್ಯಾವನೋ ಅನಂತಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋಕೆ ಅಂತಾನೆ ಎಂದು ವ್ಯಂಗ್ಯವಾಡಿದರು.