Select Your Language

Notifications

webdunia
webdunia
webdunia
webdunia

ಬೌರಿಂಗ್ ಆಸ್ಪತ್ರೆಗೆ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದ ನ್ಯಾ.ವೀರಪ್ಪ

ಬೌರಿಂಗ್ ಆಸ್ಪತ್ರೆಗೆ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದ ನ್ಯಾ.ವೀರಪ್ಪ
bangalore , ಶನಿವಾರ, 8 ಅಕ್ಟೋಬರ್ 2022 (20:54 IST)
virappa
ಬೌರಿಂಗ್ ಅಸ್ಪತ್ರೆಗೆ ನ್ಯಾ.ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಚರ್ಮ ಮತ್ತು ಗುಹ್ಯರೋಗ ವಿಭಾಗ,ಪ್ರೊಸಿಜರ್ ರೂಂನಲ್ಲಿ ಪರಿಶೀಲಿಸಿ ಚರ್ಮ ರೋಗ ವಿಭಾಗದ ವೈದ್ಯರ ಜೊತೆ ಚರ್ಚೆ ನಡೆಸಿದ್ದಾರೆ.ತದನಂತರ ಮಕ್ಕಳ ಹೊರ ರೋಗಿ ವಿಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ.
 
ಡರ್ಮೋಟಾಜಲಿ ವಿಭಾಗದಲ್ಲಿ 6 ವೈದ್ಯರಿದ್ದಾರೆ.6 ಜನರ ಪೈಕಿ ಒಬ್ಬರು ಮಾತ್ರ ಡ್ಯೂಟಿಯಲ್ಲಿ ಇದ್ದಾರೆ.ಹೀಗಾಗಿ ನ್ಯಾಯಮೂರ್ತಿ ಹೆಚ್ಚು ಜನರು ಬಂದರೆ, ಅಥವಾ ಮೇಜರ್ ಆದ್ರೆ ಒಬ್ಬರು ಹೇಗೆ ನಿರ್ವಾಹಣೆ ಮಾಡ್ತೀರಿ.? ಅಂತಾ ಪ್ರಶ್ನೆ ಮಾಡಿದ್ದಾರೆ.ನ್ಯಾಯಮೂರ್ತಿ ಗಳ ಪ್ರಶ್ನೆಗೆ ವೈದ್ಯೆ ತಡಬಡಾಯಿಸಿದಾರೆ. ನ್ಯಾ.ವೀರಪ್ಪಗೆ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯ ಕೆಂಪರಾಜು ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. 
 
ಇನ್ನೂ ಈ ವೇಳೆ ಮಾತನಾಡಿದ ನ್ಯಾ. ವೀರಪ್ಪ  ರಾಜ್ಯ ಕಾನೂನು ಪ್ರಾಧಿಕಾರಕ್ಕೆ ಅಸ್ಪತ್ರೆ ಸೌಕರ್ಯ ಸರಿಯಿಲ್ಲ ಅಂತ ರಾಜ್ಯದ ಎಲ್ಲಾ ಕಡೆಯಿಂದ ದೂರುಗಳು ಬರ್ತಾ ಇವೆ.ಹಲವು ಜಿಲ್ಲೆಗಳಲ್ಲಿ ನೋಡಿದ್ದೇವೆ.ಇವತ್ತು ಬೆಂಗಳೂರಿನಲ್ಲಿ ಹೇಗಿದೆ ಅಂತ ನೋಡೊಕೆ ಭೇಟಿ ನೀಡಲಾಗಿದೆ.750 ಬೆಡ್ ಇದೆ.ಗಲೀಜು ಇದೆ, ಸ್ವಚ್ಚತೆ ಕಡಿಮೆ ಇದೆ.ಈ ಬಗ್ಗೆ ಸರ್ಕಾರಕ್ಕೆ ವರದಿ ಕೊಡಲಾಗುವುದು.ಸರ್ಕಾರ ಹಣ ಕೊಡುತ್ತೆ, ಸ್ಟಾಪ್ ಕೊಡುತ್ತೆ, ವೈದ್ಯರನ್ನ ಕೊಡುತ್ತೆ.ಅದ್ರೆ ನಿರ್ವಹಣೆ ಕಡಿಮೆ ಇದೆ.ವೈದ್ಯರು ಇವತ್ತು ರಜೆ ಅಂತ ಸುಮಾರು ಜನ ಬಂದಿಲ್ಲ ಅಂತಾರೆ.ನಮಗೆ ಕೆಲವರಷ್ಟೆ ಕಾಣಿಸಿದ್ರು.ಸರ್ಕಾರ ಹೆಚ್ಚು ಮುತುವರ್ಜಿ ವಹಿಸಬೇಕು.ಇವತ್ತು 50 ಜನ ರೋಗಿಗಳು ಇದ್ದಾರೆ ಅಷ್ಟೇ.ಎಷ್ಟು ವೈದ್ಯರು ಇದ್ದಾರೆ, ಖಾಲಿ ಎಷ್ಟು ಇದೆ ಅನ್ನೋ ಬಗ್ಗೆ ವರದಿ ಕೇಳಿದ್ದೀನಿ.ಬೆಡ್ ಗಳು ಕ್ಲೀನ್ ಇಲ್ಲ,ಇಲ್ಲಿ ಏನೂ ಸಾಲದು.ಅದಕ್ಕೆ ಜನ ಬರ್ತಾ ಇಲ್ಲ.ಮೆಡಿಸಿನ್ ಬಳಕೆ ಅಗದೇ ಇದ್ರೆ, ಖಾಸಗಿ ಅಸ್ಪತ್ರೆಗೆ ಹೋಗುತ್ತೆ ಅಷ್ಟೇ.ಬೌರಿಂಗ್ ಅಸ್ಪತ್ರೆ ಭೇಟಿ ನೀಡಿದ ಬಳಿಕ ನ್ಯಾ. ವೀರಪ್ಪ ಆಸ್ಪತ್ರೆಯ ಬಗ್ಗೆ ಅಸಾಮಾಧಾನ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ನಿಂತಿಲ್ಲ ಒಲಾ, ಊಬರ್ ಅಟ್ಟಹಾಸ!