ಕಾವೇರಿಗಾಗಿ ಕನ್ನಡ ಒಕ್ಕೂಟದಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಕಾವೇರಿ ನಿರ್ವಹಣಾ ಮಂಡಿಳಿ ರಾಜ್ಯಕ್ಕೆ ಅನ್ಯಾಯ ಮಾಡಿದೆ.ತಮಿಳನಾಡಿನ ಪರವಾಗಿ ತೀರ್ಪು ಕೊಟ್ಟಿದೆ.ನಮ್ಮಲ್ಲಿ ನೀರಿದ್ರೆ ನಾವು ತಮಿಳುನಾಡಿಗೆ ಕೊಡಬಾರದು ಎಂದೇನಿರಲಿಲ್ಲ.ಸ್ಟಾಲಿನ್ ಇಂಡಿಯಾ ಒಕ್ಕೂಟಕ್ಕೆ ಬೆದರಿಕೆ ಹಾಕಿದ್ದಾರೆ.ಇಂಡಿಯಾ ಸಂಘಟನೆಗೂ ಕರ್ನಾಟಕ ಕ್ಕೂ ಸಂಭಂದವಿಲ್ಲ.ಸ್ಟಾಲಿನ ವಾದ ಸರಿಯಿಲ್ಲ.ನಮ್ಮ ರಾಜ್ಯ ಸರ್ಕಾರ ಶಾಸನ ಸಭೆ ಕರೆದು ತಿರ್ಮಾನ ತೆಗೆದುಕೊಳ್ಳಬೇಕು.ನೀರಿದ್ದು ನೀರನ್ನ ಕೊಡ್ತಿಲ್ಲ ಎನ್ನೊ ಹಾಗೆ ಬಿಂಬಿಸಲಾಗಿದೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಅಲ್ಲದೇ ನಾಳೆ ಕಾವೇರಿ ಪ್ರಾಧಿಕಾರದ ಸಭೆ ಇದೆ.ಸಭೆಯಲ್ಲಿ ಏನಾಗುತ್ತೆ ನೋಡೊಣ.ಪ್ರಾಧಿಕಾರದ ವಿರುದ್ದ ಸೋಮವಾರ ಭಾರಿ ಪ್ರಮಾಣದ ಹೋರಾಟ ಮಾಡ್ತೇವೆ.ಕರಾಳ ದಿನವನ್ನ ಸೋಮವಾರ ಆಚರಿಸುಸ್ತೇವೆ.ಬೆಂಗಳೂರಿಗೆ ಕುಡಿಯುವ ನೀರಿಲ್ಲ.ಕಾವೇರಿ ನೀರು ತಮಿಳುನಾಡಿಗೆ ಬಿಡೊದಕ್ಕಾಗಲ್ಲ.16 ಕ್ಕೆ ಕರಾಳ ದಿನ ಆಚರಿಸುತ್ತೇವೆ.ಜಿಲ್ಲಾಧಿಕಾರಿ ಕಚೇರಿ ಮುಂದೆ ಕಪ್ಪು ಬಾವುಟ ಪ್ರದರ್ಶನ ಮಾಡ್ತೇವೆ ಎಂದು ವಾಟಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಮೆಜಸ್ಟಿಕ್ ಬಸ್ ನಿಲ್ದಾಣದಲ್ಲಿ ಇಂದು ವಾಟಾಳ್ ಧರಣಿ ಕುಳಿತಿದ್ದು.ವಾಟಾಳ್ ನಾಗರಾಜ್ ಧರಣಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ವಾಟಾಳ್ ನಾಗರಾಜ್ ರನ್ನ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.