ಬೆಳ್ತಂಗಡಿ: ಧರ್ಮಸ್ಥಳ ಸುತ್ತಾ ಮುತ್ತಾ ಹಲವು ಬುರುಡೆಯನ್ನು ಹೂತಿಡಲಾಗಿದೆ ಎಂಬ ಆರೋಪ ಸಂಬಂಧ ಎಸ್‌ಐಟಿ ತಂಡ ದೂರುದಾರ ಗುರುತಿಸಿದ ಪಾಯಿಂಟ್‌ಗಳಲ್ಲಿ ಶೋಧ ಕಾರ್ಯವನ್ನುಎಸ್‌ಐಟಿ ಮುಂದುವರೆಸಿದೆ.
ಆದರೆ ದೂರುದಾರ ಗುರುತಿಸಿದ 13 ಪಾಯಿಂಟ್‌ಗಳಲ್ಲಿ 1 ಪಾಯಿಂಟ್‌ನಲ್ಲಿ ಬಿಟ್ಟರೆ ಬೇರೆಲ್ಲೂ ಬುರುಡೆ ಸಿಕ್ಕಿಲ್ಲ. 13ನೇ ಪಾಯಿಂಟ್ ಹಾಗೆಯೇ ಬಿಟ್ಟು ಇದೀಗ ನಿನ್ನೆಯಿಂದ ಎಸ್‌ಐಟಿ ತಂಡ ದೂರುದಾರ ಗುರುತಿಸಿದ ಬೇರೆ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. 15ನೇ ಎ, ಬಿ,ಸಿ ಸ್ಥಳದಲ್ಲೂ ಯಾವುದೇ ಮೂಳೆಗಳು ಪತ್ತೆಯಾಗಿಲ್ಲ.
ಇಂದು ದೂರುದಾರನನ್ನು ವಿಚಾರಣೆ ನಡೆಸಿ, ಮತ್ತೇ ಆತ ಗುರುತಿಸಿದ ಹೊಸ ಸ್ಥಳದ ಕಡೆ ಎಸ್‌ಐಟಿ ಹೊರಡಲಿದೆ ಎಂದು ಮಾಹಿತಿ ತಿಳಿದುಬಂದಿದೆ.