ಬೆಳ್ತಂಗಡಿ: ಧರ್ಮಸ್ಥಳದ ಸುತ್ತಮುತ್ತಾ ಹಲವು ಮೃತದೇಹಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣ ಸಂಬಂಧ ಇದೀಗ ತನಿಖೆ ನಿರ್ಣಾಯಕ ಘಟಕ್ಕೆ ತಲುಪಿದೆ. ಇದೀಗ ಎಸ್‌ಐಟಿ ಕಚೇರಿಗೆ ಮತ್ತೊಬ್ಬ ಅಪರಿಚಿತ ದೂರುದಾರ ಇಂದು ಎಂಟ್ರಿ ಕೊಟ್ಟಿದ್ದಾನೆ.
ಇದೀಗ ಕಳೇಬರಹ ಉತ್ಖನನ ಸಂಬಂಧ ಸಾಕ್ಷಿ ದೂರುದಾರ ಗುರುತಿಸಿದ 13 ಪಾಯಿಂಟ್‌ಗಳಲ್ಲಿ 13ನೇ ಪಾಯಿಂಟ್ ಬಿಟ್ಟರೆ ಬೇರೆಲ್ಲ ಪಾಯಿಂಟ್‌ಗಳಲ್ಲೂ ಉತ್ಖನನ ಪೂರ್ಣಗೊಂಡಿದೆ. 6ನೇ ಪಾಯಿಂಟ್ ಬಿಟ್ಟರೆ, 11ನೇ ಪಾಯಿಂಟ್‌ನ ಪಕ್ಕದಲ್ಲಿ ಕೆಲ ಮೂಳೆಗಳು ಪತ್ತೆಯಾಗಿತ್ತು. ಇದೀಗ ದೂರುದಾರ ಗುರುತಿಸಿದ ಕೇವಲ ಒಂದೇ ಪಾಯಿಂಟ್ ಅಷ್ಟೇ ಬಾಕಿಯಿದ್ದು, ಅದರ ಉತ್ಖನನ ನಾಳೆ ನಡೆಯಲಿದೆ ಎನ್ನಲಾಗಿದೆ.
ಇಂದು 4ಗಂಟೆಗೆ ಉತ್ಖನನ ಕಾರ್ಯ ಅಂತಿಮ ಗೊಳಿಸಿದ್ದು, ಬಳಿಕ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ದೂರುದಾರನನ್ನು ಒಂದು ಗಂಟೆ ವಿಚಾರಣೆ ನಡೆಸಿದ್ದಾರೆ.
ಧರ್ಮಸ್ಥಳದ ಸುತ್ತಾ ಮುತ್ತ ಹಲವು ಮೃತದೇಹಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣ ಇದೀಗ ಅಂತಿಮ ಘಟಕ್ಕೆ ತಲುಪುತ್ತಿದ್ದ ಬೆನ್ನಲ್ಲೇ ಮತ್ತೊಬ್ಬ ಅಪರಿಚಿತ ವ್ಯಕ್ತಿ ಎಸ್‌ಐಟಿ ದೂರು ನೀಡಿದ್ದಾನೆ.
ಎಸ್‌ಐಟಿ ಕಚೇರಿಯಲ್ಲಿ ಎರಡನೇ ದೂರುದಾರ ಬಂದಿದ್ದು, ಅವನನ್ನು ತೀವ್ರ ವಿಚಾರಣೆ ಮಾಡಲಾಗಿದೆ.
ವಿಚಾರಣೆ ವೇಳೆ