Select Your Language

Notifications

webdunia
webdunia
webdunia
webdunia

ಧರ್ಮಸ್ಥಳ, ಎಲ್ಲರ ಚಿತ್ತ ನಾಳೆಯ ಕೊನೆಯ ಪಾಯಿಂಟ್‌ನತ್ತ, ಇಂದಿನ ಶೋಧದಲ್ಲಿ ಬಿಗ್‌ಟ್ವಿಸ್ಟ್‌

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ

Sampriya

ಬೆಳ್ತಂಗಡಿ , ಮಂಗಳವಾರ, 5 ಆಗಸ್ಟ್ 2025 (18:33 IST)
ಬೆಳ್ತಂಗಡಿ: ಧರ್ಮಸ್ಥಳದ ಸುತ್ತಾಮುತ್ತಾ ಹಲವು ಮೃತದೇಹಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣ ಸಂಬಂಧ ಇದೀಗ ಉತ್ಖನನ ಕಾರ್ಯ ಕೊನೆ ಹಂತಕ್ಕೆ ತಲುಪಿದೆ. 

ಈಗಾಗಲೇ ದೂರುದಾರ ಗುರುತಿಸಿದ 13 ಪಾಯಿಂಟ್‌ಗಳಲ್ಲಿ 6 ಹಾಗೂ 11ನೇ ಪಾಯಿಂಟ್‌ನ ಅಸುಪಾಸಿನಲ್ಲೇ ಕೆಲ ಮೂಳೆಗಳು ಪತ್ತೆಯಾಗಿತ್ತು ಬಿಟ್ಟರೆ, ಬೇರೆಲ್ಲ ಪಾಯಿಂಟ್‌ನಲ್ಲಿ ಏನೂ ಪತ್ತೆಯಾಗಿಲ್ಲ. 

ಇಂದು 11 ಹಾಗೂ 12ನೇ ಪಾಯಿಂಟ್‌ನಲ್ಲಿ ಅವಶೇಷಗಳ ಉತ್ಖನನ ನಡೆದಿದ್ದು, ಮಾನವ ಶ್ರಮದಿಂದ ನಾಲ್ಕು ಅಡಿ ಅಗೆದರು ಯಾವುದೇ ಮೂಳೆಗಳು ಪತ್ತೆಯಾಗಿಲ್ಲ. ಇದೀಗ ದೂರುದಾರ ಗುರುತಿಸಿದ 13ನೇ ಪಾಯಿಂಟ್‌ ಮಾತ್ರ ಉತ್ಖನನ ಮಾಡಲು ಉಳಿದಿದ್ದು, ಅದು ನಾಳೆ ಬೆಳಿಗ್ಗೆ 10ರಿಂದ ಆರಂಭಗೊಳ್ಳಲಿದೆ. ಇದೀಗ ಎಲ್ಲರ ಚಿತ್ತಾ 13ನೇ ಪಾಯಿಂಟ್‌ನಲ್ಲಿದೆ. ಏನಾದರೂ ಈ ಪಾಯಿಂಟ್‌ನಲ್ಲಿ ಮೂಳೆಗಳು ಸಿಕ್ಕರೆ ತನಿಖೆಯ ದಿಕ್ಕು ಬೇರೆಡೆಗೆ ಸಾಗಲಿದೆ. 

13ನೇ ಪಾಯಿಂಟ್‌ ನೇತ್ರವಾತಿ ಸ್ಥಾನಘಟ್ಟದ ಪಕ್ಕದಲ್ಲೇ ಈ ಪಾಯಿಂಟ್ ಇರಲಿದೆ.  ಈ ಸ್ಥಳ ಜನನಿಬಿಡ ಪ್ರದೇಶದಲ್ಲಿದ್ದು, ಕುತೂಹಲದಿಂದ ಸಾಕಷ್ಟು ಮಂದಿ  ಜನ ಸೇರುವ ಸಾಧ್ಯತೆಯೂ ಇದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಕಾಶಿಯ ರಣಭೀಕರ ಮೇಘಸ್ಫೋಟ: ಮಿಡಿದ ಮೋದಿಯಿಂದ, ರಕ್ಷಣಾ ನೆರವು ಘೋಷಣೆ