Publish Date: Thu, 19 Mar 2026 (20:22 IST)
Updated Date: Thu, 19 Mar 2026 (20:24 IST)
ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ವಿಡಿಯೋ ಅಸಲಿಯತ್ತು ಏನೆಂದು ತನಿಖೆಯಿಂದ ಬಯಲಾಗಿದೆ.
ಕೆಲವು ದಿನಗಳ ಹಿಂದೆ ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ತಕ್ಷಣವೇ ಗೃಹ ಇಲಾಖೆ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಿ ಇಲಾಖೆ ಮಟ್ಟದಲ್ಲಿ ತನಿಖೆಗೆ ಆದೇಶಿಸಿತ್ತು.
ಇದೀಗ ತನಿಖೆ ಪೂರ್ಣಗೊಂಡಿದ್ದು ವಿಡಿಯೋಗಳು ಅಸಲಿ ಎಂದು ಬಯಲಾಗಿದೆ. ಈ ವಿಡಿಯೋಗಳು ಎಐ ನಿರ್ಮಿತ ಅಥವಾ ಡೀಪ್ ಫೇಕ್ ವಿಡಿಯೋ ಅಥವಾ ಎಡಿಟ್ ಮಾಡಲಾದ ವಿಡಿಯೋಗಳು ಅಲ್ಲ ಎಂದು ತನಿಖೆಯಿಂದ ಖಚಿತವಾಗಿದೆ.
ಇದರೊಂದಿಗೆ ರಾಮಚಂದ್ರ ರಾವ್ ಗೆ ತೀವ್ರ ಹಿನ್ನಡೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅವರು ನಿವೃತ್ತರಾಗಲಿದ್ದರು. ಇದಕ್ಕೆ ಮೊದಲು ಪ್ರತಿಕ್ರಿಯಿಸಿದ್ದ ಅವರು ಇದು ಎಐ ವಿಡಿಯೋ ಎಂದಿದ್ದರು. ಆದರೆ ಈಗ ವಿಡಿಯೋಗಳು ಅಸಲಿ ಎಂದು ಖಚಿತವಾಗಿದ್ದು ಸದ್ಯಕ್ಕೆ ಅವರ ನಿವೃತ್ತಿ ವೇತನ, ಇತರೆ ಸೌಲಭ್ಯಗಳನ್ನುಸ್ಥಗಿತಗೊಳಿಸಲಾಗುತ್ತದೆ.
ಇನ್ನು ವಿಡಿಯೋದಲ್ಲಿದ್ದ ಇಬ್ಬರು ಮಹಿಳೆಯರು ಸದ್ಯಕ್ಕೆ ನಾಪತ್ತೆಯಾಗಿದ್ದಾರೆ. ಇವರು ಆಗಾಗ ರಾಮಚಂದ್ರ ರಾವ್ ಅವರ ಖಾಸಗಿ ಕಚೇರಿಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆ ಈ ವಿಡಿಯೋಗಳನ್ನು ಚಿತ್ರೀಕರಿಸಿದ್ದಾಳೆ ಎನ್ನಲಾಗಿದೆ. ಸದ್ಯಕ್ಕೆ ಮಹಿಳೆಯರಿಗಾಗಿ ಹುಡುಕಾಟ ನಡೆದಿದೆ.