ಬೆಂಗಳೂರು: ಚಿನ್ನದಂತೆ ತೈಲ ಉತ್ಪನ್ನವನ್ನೂ ದುಬೈನಿಂದ ಕಳ್ಳ ಸಾಗಣಿಕೆ ಮಾಡುವ ಬೃಹತ್ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.
ಗಲ್ಫ್ ರಾಷ್ಟ್ರಗಳಿಂದ ತೈಲ ಉತ್ಪನ್ನಗಳನ್ನು ಕರ್ನಾಟಕಕ್ಕೆ ಕಳ್ಳ ಮಾರ್ಗದಲ್ಲಿ ತರಲಾಗುತ್ತಿತ್ತು. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಮಾಡಲಾಗುತ್ತಿತ್ತು. ಈ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.
ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ವಶಕ್ಕೆ ಪಡೆದು ಕಳ್ಳ ಸಾಗಣಿಕೆ ಜಾಲ ಬಯಲಿಗೆಳೆದಿದ್ದಾರೆ ಪೊಲೀಸರು. ಇನ್ಸ್ ಪೆಕ್ಟರ್ ಬಿಆರ್ ಗಡ್ಡೇಕರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಇವರ ಜಾಲದಲ್ಲಿ ಅನ್ಯ ರಾಜ್ಯಗಳ ಖದೀಮರೂ ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದೆ. ಇದು ಇಂದು ನಿನ್ನೆಯದ್ದಲ್ಲ, ಹಲವು ವರ್ಷಗಳಿಂದಲೇ ಈ ದಂಧೆ ನಡೆಯುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.