Select Your Language

Notifications

webdunia
webdunia
webdunia
webdunia

ಅವಿತಿರುವ ನಕ್ಸಲರಿಗೆ ಎಚ್ಚರಿಕೆ ನೀಡಿದ ಡಿಜಿಪಿ ಪ್ರಣಬ್ ಮೊಹಂತಿ

Naxal Vikram Gowda

Sampriya

ಉಡುಪಿ , ಗುರುವಾರ, 21 ನವೆಂಬರ್ 2024 (18:08 IST)
Photo Courtesy X
ಉಡುಪಿ: ಮೋಸ್ಟ್‌ ವಾಟೆಂಡ್ ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಬೆನ್ನಲ್ಲೇ ಅವರ ಜತೆಗಿದ್ದ ಇತರರಿಗೆ ಶರಣಾಗತಿಯೊಂದೇ ನಿಮಗಿರುವ ಒಂದೇ ಒಂದು ದಾರಿ ಎಂಬ ಸಂದೇಶವನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಸಂದೇಶ ರವಾನಿಸಿದ್ದಾರೆ.

ಎನ್‌ಕೌಂಟರ್ ಆದ ವೇಳೆ ಇತರ ನಕ್ಸಲರು ತಪ್ಪಿಸಿಕೊಂಡಿದ್ದು ಅವಿತಿರುವ ನಕ್ಸಲರು ಕೂಡಲೇ ಶರಣಾಗಬೇಕೆಂದು ಪ್ರಣವ್ ಮೊಹಂತಿ ನಕ್ಸಲರಿಗೆ ಎಚ್ಚರಿಕೆ ನೀಡಿದ್ದಾರೆ.  ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಭೇಟಿ ನೀಡಿ, ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದರು.

ಡಿಜಿಪಿ ಭೇಟಿ ಬೆನ್ನಲ್ಲೇ ಕೂಂಬಿಂಗ್ ಚುರುಕುಗೊಂಡಿದೆ. ಪೀತಬೈಲ್, ಕಬ್ಬಿನಾಲೆ ಬಚ್ಚಪ್ಪು ಪರಿಸರದಲ್ಲಿ ಓಡಾಟ ನಡೆಸಿ ಎಎನ್‌ಎಫ್ ಕ್ಯಾಂಪ್‌ಗೆ ಭೇಟಿಕೊಟ್ಟು ಕೆಲ ಸೂಚನೆ ನೀಡಿರುವ ನೀಡಿದ್ದಾರೆ.

ಇನ್ನೂ ವಿಕ್ರಂ ಗೌಡ ಎನ್‌ಕೌಂಟರ್‌  ಸಂಬಂಧ  ಕಬ್ಬಿನಾಲೆ ಅರಣ್ಯ ಪ್ರದೇಶ ವ್ಯಾಪ್ತಿಯ ಪೀತಬೈಲು ಘಟನಾ ಸ್ಥಳದಲ್ಲಿ ದಾಖಲೆ ಸಂಗ್ರಹ ಮಾಡುವ ಸಲುವಾಗಿ ಎಎನ್‌ಎಫ್ ಬೆಂಗಳೂರಿನಿಂದ ತಜ್ಞ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ಅಧಿಕಾರಿಗಳನ್ನು ಕರೆಸಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಗ್ಯಾರಂಟಿ ಹೊರೆಯಿಂದ ಬಡವರ ಬಿಪಿಎಲ್‌ ಕಾರ್ಡ್‌ಗೆ ಬರೆ: ಜೆಡಿಎಸ್‌ ಆಕ್ರೋಶ