Select Your Language

Notifications

webdunia
webdunia
webdunia
webdunia

ಸುಖಸಮ್ಮನೆ ವಾಹನ ತಡೆಯುವಂತಿಲ್ಲ.. - ಡಿ. ಜಿ. & ಐ. ಜಿ. ಪಿ. ಪ್ರವೀಣ್ ಸೂದ್ ಆದೇಶ

ಸುಖಸಮ್ಮನೆ ವಾಹನ ತಡೆಯುವಂತಿಲ್ಲ.. - ಡಿ. ಜಿ. & ಐ. ಜಿ. ಪಿ. ಪ್ರವೀಣ್ ಸೂದ್ ಆದೇಶ
ಬೆಂಗಳೂರು , ಭಾನುವಾರ, 17 ಜುಲೈ 2022 (15:29 IST)
ದಾಖಲೆಗಳ ಪರಿಶೀಲನೆಗಾಗಿ ಸುಖಾಸುಮ್ಮನೆ ವಾಹನ ತಡೆಯದಂತೆ ಕರ್ನಾಟಕ DG-IGP ಪ್ರವೀಣ್ ಸೂದ್ ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.
 
ವಾಹನ ತಡೆಯೋ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಆದೇಶ ಹೊರಡಿಸಿರುವ ಪ್ರವೀಣ್ ಸೂದ್ ಅವರು ಸುಖಾಸುಮ್ಮನೆ ವಾಹನಗಳನ್ನ ನಿಲ್ಲಿಸದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್​​ಪಿ‌ಗಳಿಗೆ ಖಡಕ್ ಸೂಚನೆ ನೀಡಿದ್ಧಾರೆ.
ಡಾಕ್ಯುಮೆಂಟ್ ಪರಿಶೀಲನೆಗೆ ವಾಹನ ಸವಾರರನ್ನ ನಿಲ್ಲಿಸಬೇಡಿ, ಡ್ರಿಂಕ್ & ಡ್ರೈವ್ ಮಾಡೋರನ್ನ ಮಾತ್ರ ಪರಿಶೀಲನೆ ಮಾಡಿ, ಕಣ್ಣಿಗೆ ಕಾಣುವಂತ ಅಪರಾಧ ಕಂಡು ಬಂದರೆ ಮಾತ್ರ ವಾಹನ ನಿಲ್ಲಿಸಿ, ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಈ ಸೂಚನೆ ಅನುಸರಿಸಬೇಕು. ಸೂಚನೆಯನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
 
ಕಾನೂನು ಪಾಲಿಸುವವರ ಕಷ್ಟ ತಪ್ಪಿಸಲು ಸಮಯ ಇದು. ಕಣ್ಣಿಗೆ ಕಾಣಿಸೋ ಹಾಗೆ ಅಪರಾದ ಮಾಡಿದ್ರೆ ತಡೆದು ಪರಿಶೀಲಿಸಿ.
ದುರಾದೃಷ್ಟಕ್ಕೆ ಈ ಆದೇಶ ನಿರ್ಭಯದಿಂದ ಧಿಕ್ಕರಿಸಲಾಗ್ತಿದೆ. ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಸೂಚನೆ ಅನುಸರಿಸಬೇಕು.
ಈ ಸೂಚನೆ ಕೆಳ ಹಂತದ ವರೆಗೆ ತಲುಪಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಚುನಾವಣೆ ಶಾಸಕರು ಖಾಸಗಿ ಹೋಟೆಲ್ ಗೆ ಶಿಫ್ಟ್