Select Your Language

Notifications

webdunia
webdunia
webdunia
Friday, 11 April 2025
webdunia

ಇಡೀ ರಾಜ್ಯ ಹಾಗೂ ದೇಶ ಆಳಬೇಕು ಎನ್ನುವ ಸ್ವಾರ್ಥ ದೇವೇಗೌಡರ ಕುಟುಂಬಕ್ಕಿದೆ- ಬಸನಗೌಡ ಪಾಟೀಲ ಯತ್ನಾಳ್

ವಿಜಯಪುರ
ವಿಜಯಪುರ , ಭಾನುವಾರ, 10 ಮಾರ್ಚ್ 2019 (06:32 IST)
ವಿಜಯಪುರ : ಇಡೀ ರಾಜ್ಯ ಹಾಗೂ ದೇಶ ಆಳಬೇಕು ಎನ್ನುವ ಸ್ವಾರ್ಥ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೌಡರ ಕುಟುಂಬ ರಾಜಕೀಯದ ವಿರುದ್ಧ ಗುಡುಗಿದ್ದಾರೆ.


ನಗರದಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರಿಗೆ 28 ಮೊಮ್ಮಕ್ಕಳು ಇದ್ದಿದ್ದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಂದ ಅವರನ್ನು ಕಣಕ್ಕೆ ಇಳಿಸುತ್ತಿದ್ದರು. ಅಷ್ಟೇ ಅಲ್ಲದೆ 224 ಮರಿ ಮೊಮ್ಮಕ್ಕಳು ಇದ್ದಿದ್ದರೆ ವಿಧಾನಸಭೆಗೆ ನಿಲ್ಲಿಸುತ್ತಿದ್ದರು ಎಂದು ಕಿಡಿಕಾರಿದ್ದಾರೆ.


ವಿಶ್ವ ಮಹಿಳಾ ದಿನದಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಸುಮಲತಾ ಅವರ ಬಗ್ಗೆ ಹಗುರವಾಗಿ ಮಾತನಾಡಿ ಸಚಿವರು ಕೇವಲ ಸುಮಲತಾ ಅಂಬರೀಶ್ ಅವರಿಗೆ ಅಷ್ಟೇ ಅಲ್ಲ, ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ರೇವಣ್ಣ ಅವರ ಹೇಳಿಕೆ ದೇವೇಗೌಡ ಅವರ ಕುಟುಂಬಕ್ಕೆ ಶೋಭೆ ತರುವುದಿಲ್ಲ. ಹೀಗಾಗಿ ಸಚಿವ ರೇವಣ್ಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಜೊತೆಗೆ ಸಚಿವರು ಮಾಡಿದ ತಪ್ಪಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಕೂಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಕನ್ನಡದ ಮಗಳು ಎಂದ ಬಿಜೆಪಿ ಸಂಸದೆ