Publish Date: Mon, 20 May 2024 (09:20 IST)
Updated Date: Mon, 20 May 2024 (09:42 IST)
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾಜಿ ಸಂಸದ ಎಸ್.ಆರ್. ಶಿವರಾಮೇಗೌಡ ಮತ್ತು ದೇವರಾಜೇಗೌಡ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯೊಂದು ಈಗ ವೈರಲ್ ಆಗಿದೆ.
ಎಲ್. ಶಿವರಾಮೇಗೌಡ ಈ ವಿಡಿಯೋ ಪ್ರಕರಣದ ರೂವಾರಿ ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಜೊತೆ ನಡೆಸಿದ ಸಂಭಾಷಣೆಯೊಂದು ಈಗ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಜೊತೆ ಕೈ ಜೋಡಿಸುವಂತೆ ದೇವರಾಜೇಗೌಡಗ ಶಿವರಾಮೇಗೌಡ ಹೇಳುತ್ತಿದ್ದಾರೆ ಎನ್ನಲಾದ ಸಂಭಾಷಣೆ ತುಣುಕು ವೈರಲ್ ಆಗಿದೆ.
ಈ ಸಂಭಾಷಣೆಯಲ್ಲಿ ಶಿವರಾಮೇಗೌಡ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಬಲಿಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನೀವು ಡಿಕೆ ಶಿವಕುಮಾರ್ ಜೊತೆ ಕೈಜೋಡಿಸಿದರೆ ಯಾವ ಸಹಾಯ ಬೇಕೋ ಮಾಡುತ್ತಾರೆ. ಜೆಡಿಎಸ್ ನ್ನು ಎನ್ ಡಿಎನಿಂದ ಹೊರಹಾಕಲು ನಾನೇ ಮೋದಿಯವರಿಗೆ ಒತ್ತಾಯ ಮಾಡುತ್ತೇನೆ. ನಿಮ್ಮ ಬಳಿ ಏನೇನು ವಿಡಿಯೋಗಳಿವೆಯೋ ಅದನ್ನೆಲ್ಲಾ ನನಗೆ ಕೊಡಿ. ನೀವು ಯಾವುದಕ್ಕೂ ಹೆದರಬೇಡಿ. ನಿಮಗೆ ಏನು ಹೆಲ್ಪ್ ಬೇಕೋ ಅದನ್ನು ಡಿಕೆಶಿ ಮಾಡುತ್ತಾರೆ. ಅಷ್ಟಕ್ಕೂ ದೇವೇಗೌಡರು ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲವಲ್ಲ ಎನ್ನುತ್ತಾರೆ.
ಇದಕ್ಕೆ ಪ್ರತಿಯಾಗಿ ದೇವರಾಜೇಗೌಡ ಇದು ಹೆಣ್ಣು ಮಕ್ಕಳ ಮಾನದ ಪ್ರಶ್ನೆಯಲ್ವಾ? ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ. ಅದಕ್ಕೆ ಶಿವರಾಮೇಗೌಡ ನಿಮಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತಾರೆ. ಅಷ್ಟಕ್ಕೂ ನೀವೇನು ಹಾಸನದಲ್ಲಿ ಪೆನ್ ಡ್ರೈವ್ ಹಂಚಿಲ್ಲ. ನೀನೊಬ್ಬ ವಕೀಲನಾಗಿ ಹೀಗೆ ಹೆದರಿದರೆ ಹೇಗೆ ಎಂದು ಪ್ರಶ್ನಿಸುತ್ತಾರೆ. ಅಲ್ಲದೆ, ಕುಮಾರಸ್ವಾಮಿಯವರೇ ವಿಡಿಯೋ ಲೀಕ್ ಮಾಡಲು ಹೇಳಿದರು ಎಂದೂ ಹೇಳು ಎಂದು ಒತ್ತಾಯಿಸುತ್ತಾರೆ. ಈ ಅಡಿಯೋ ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.
Krishnaveni K
Publish Date: Mon, 20 May 2024 (09:20 IST)
Updated Date: Mon, 20 May 2024 (09:42 IST)