ಪ್ರಚಾರಕ್ಕೆ ಕರೆದಿರುವುದಾಗಿ ದೇವೇಗೌಡರು ಹೇಳಿದ್ದಲ್ಲಿ ರಾಜಕೀಯಕ್ಕೆ ಗುಡ್‌ಬೈ ಹೇಳುವೆ: ಜಿಟಿಡಿ

Sampriya
ಸೋಮವಾರ, 25 ನವೆಂಬರ್ 2024 (18:39 IST)
Photo Courtesy X
ಮೈಸೂರು:  ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಮತ್ತು ಮಾಜಿ ಸಚಿವ ಸಾ.ರಾ ಮಹೇಶ್ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಎಚ್‌.ಡಿ. ದೇವೇಗೌಡರು ಕರೆದಿಲ್ಲ. ಕರೆದಿದ್ದೆ ಎಂದು ಅವರು ಹೇಳಿದರೆ, ನಾನು ಅಂದೇ ರಾಜಕಾರಣ ಬಿಟ್ಟು ಬಿಡುತ್ತೇನೆ ಎಂದು ಜಿಟಿಟಿ ಸಾವಳೆಸೆದರು.

ಜಿಟಿಡಿ ಅವರನ್ನು ದೇವೇಗೌಡರೆ ಕರೆ ಮಾಡಿ ಕರೆದಿದ್ದರು ಎಂಬ ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿಕೆಗೆ ಮೈಸೂರಿನಲ್ಲಿ ತಿರುಗೇಟು ನೀಡಿದರು.

ಎಚ್.ಡಿ.ದೇವೆಗೌಡರು ನನ್ನನ್ನು ಉಪಚುನಾವಣೆ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಹೇಳಲಿ. ನಾನು ಅಂದೆ ರಾಜಕಾರಣವನ್ನ ಬಿಟ್ಟುಬಿಡುತ್ತೇನೆ. ಸಾ.ರಾ.ಮಹೇಶ್ ಸುಮ್ಮನೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿಕೊಂಡು ಚಾಮುಂಡಿಬೆಟ್ಟಕ್ಕೆ ಬಾ ಅಲ್ಲಿಗೆ ಬಾ ಅಂದರೆ ಹೋಗಲು ಆಗುತ್ತದ. ಈ ಹಿಂದೆ ವಿಶ್ವನಾಥ್ ಜೊತೆ ಚಾಮುಂಡಿಬೆಟ್ಟಕ್ಕೆ ಹೋಗಿ ಅವರ ಕಥೆ ಏನಾಯಿತು. ಆ ಕಥೆ ನನಗು ಆಗಬೇಕಾ ಎಂದು ಖಾರವಾಗಿ ಮಾತನಾಡಿದರು.

ನಾನು ಹೇಳುತ್ತಿರೋದೆ ಸತ್ಯ. ನಾನು ತಪ್ಪು ಮಾಡಿದ್ದರೆ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ.  ನಾನು ಯಾವುದಕ್ಕೂ ಹೆದರುವುದಿಲ್ಲ ಸುಳ್ಳು ಹೇಳುವವನು ಅಲ್ಲ. ಸಾರಾ ಮಹೇಶ್ ಸುಮ್ಮನೆ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೂರಜ್​ ರೇವಣ್ಣಗೆ ಮತ್ತೆ ಸಂಕಷ್ಟ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಬಿ ರಿಪೋರ್ಟ್‌ ತಿರಸ್ಕರಿಸಿದ ಕೋರ್ಟ್‌

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಾಟಿ ಕೋಳಿ ತಿಂದ ಸಿದ್ದರಾಮಯ್ಯ ಎಂದ ಶಾಸಕ ಸುರೇಶ್ ಕುಮಾರ್: ರಾಜ್ಯಕ್ಕೆ ವೆಜ್ ಸಿಎಂ ಬೇಕಿತ್ತಾ ಎಂದ ನೆಟ್ಟಿಗರು

ಡಿಕೆ ಶಿವಕುಮಾರ್ ಜೊತೆ ಬ್ರೇಕ್ ಫಾಸ್ಟ್ ಬಳಿಕ ಫೈನಲ್ ನಿರ್ಧಾರ ಹೇಳಿದ ಸಿಎಂ ಸಿದ್ದರಾಮಯ್ಯ

ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಆಪರೇಷನ್ ಸಾಗರ್ ಬಂಧು ಆರಂಭಿಸಿದ ಭಾರತ

ಮುಂದಿನ ಸುದ್ದಿ
Show comments