ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೆಬಿಯಾದ ಜೆದ್ದಾದಲ್ಲಿ ಆರಂಭಗೊಂಡಿದೆ.
ಶುಕ್ರವಾರ ಗೋವಾ ವಿರುದ್ಧ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ 130 ರನ್ ಸಿಡಿಸಿ, ಅಬ್ಬರಿಸಿದ್ದ ಶ್ರೇಯಸ್ ಅಯ್ಯರ್‌ಗೆ ಹರಾಜಿನಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಶ್ರೇಯಸ್ ಖರೀದಿಗೆ ಪೈಪೋಟಿ ನಡೆಯಿತು.
ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಪಡೆಯಲು ಹಲವು ತಂಡಗಳಿಂದ ಭಾರೀ ಬೇಡಿಕೆ ವ್ಯಕ್ತವಾಯಿತು. ಅಂತಿಮವಾಗಿ ₹26.75 ಕೋಟಿ ಮೊತ್ತಕ್ಕೆ ಪಂಜಬ್ ಕಿಂಗ್ಸ್ ತಂಡದ ಪಾಲಾದರು. ಕೊನೆಗೆ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ.
ಳೆದ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಕೆಕೆಆರ್ ತಂಡವು 24.75ಕೋಟಿಗೆ ಖರೀದಿಸಿತ್ತು. ಇದು ಈವರೆಗಿನ ದಾಖಲೆಯಾಗಿತ್ತು.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಅರ್ಷದೀಪ್ ಸಿಂಗ್‌ಗಾಗಿ ಭಾರಿ ಪೈಪೋಟಿ ನಡೆಸಿದವು. ಆರ್ ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅರ್ಷದೀಪ್‌ರನ್ನು ಖರೀದಿ ಮಾಡಲು ರೇಸ್‌ನಲ್ಲಿ ಬಂದರೂ ಬಳಿಕ ಹಿಂದದೆ ಸರಿದರು. ಕೊನೆಗೆ ರೈಟ್ ಟು ಮ್ಯಾಚ್ ಅಡಿಯಲ್ಲಿ ₹18 ಕೋಟಿ ನೀಡಿ ಅರ್ಷದೀಪ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿ ಮಾಡಿದೆ.
ಬಳಿಕ ಸನ್‌ರೈಸರ್ಸ್ ಹೈದರಾಬಾದ್ ಬಿಡ್ ಮೊತ್ತವನ್ನು 18 ಕೋಟಿ ರೂಪಾಯಿಗೆ ಏರಿಸಿದರೂ, ಪಂಜಾಬ್ ಕಿಂಗ್ಸ್ ಅರ್ಷದೀಪ್ ಸಿಂಗ್‌ರನ್ನು ಆರ್ ಟಿಎಂ ಮಾಡಿಕೊಳ್ಳಲು ನಿರ್ಧರಿಸಿತು. ಅಂತಿಮವಾಗಿ ಅರ್ಷದೀಪ್ ಸಿಂಗ್ ತಮ್ಮ ಹಳೆಯ ತಂಡಕ್ಕೆ ವಾಪಸಾದರು.