ರಾಮನಗರ: ದೇವೇಗೌಡರ ಕುಟುಂಬಕ್ಕೆ ಹಿಂದಿನಿಂದಲೂ ನನ್ನ ಸಹೋದರ ಡಿ ಕೆ ಶಿವಕುಮಾರ್ ಮೇಲೆ ಹಗೆತನ ಸಾಧಿಸುತ್ತಾ ಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಹೇಳಿದರು.
ಇಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮಗೆ ದೇವೇಗೌಡರ ಕುಟುಂಬದಂತೆ ದ್ವೇಷದ ಭಾವನೆಯಿಲ್ಲ. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ನಾವು ಅವರಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಅವರು ಬೇರೆ ರೀತಿ ವ್ಯಾಖ್ಯಾನ ಮಾಡಿದರೆ ನಾನು ಅದಕ್ಕೆ ಉತ್ತರ ನೀಡಲಾರೆ ಎಂದರು.
ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಒಕ್ಕಲಿಗ ನಾಯಕತ್ವ ಕುರಿತ ಹೇಳಿಕೆಗೆ ತಿರುಗೇಟು ನೀಡಿ ಅವರು ಮಾತನಾಡಿದರು. ಚುನಾವಣೆ ಹೊತ್ತಿನಲ್ಲಿ ವೈಯ್ಯಕ್ತಿಕ ಟೀಕೆ ಮಾಡುತ್ತಿರುವುದು ಕುಮಾರಸ್ವಾಮಿ ಅವರು ಚುನಾವಣೆ ನಂತರ ನನ್ನ ಜತೆ ಚರ್ಚೆಗೆ ಬರಲಿ ಎಂದರು.
ಒಕ್ಕಲಿಗರ ನಾಯಕತ್ವ ಯಾರ ಸ್ವತ್ತೂ ಅಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾನು ಮಾತ್ರ ಒಕ್ಕಲಿಗರ ನಾಯಕ ಎಂಬ ಭಾವನೆಯನ್ನು ಇಟ್ಟುಕೊಂಡಿಲ್ಲ. ಸಮುದಾಯದವರು ಸ್ವಾಭಿಮಾನಿಗಳು. ಯಾರನ್ನು, ಯಾವಾಗ, ಏನು ಮಾಡಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಖಡಕ್ಕಾಗಿ ಉತ್ತಿರಿಸದರು.<>