ರಾಜಕೀಯದಲ್ಲಿ ಒಬ್ಬರನ್ನು ಮುಗಿಸುವುದರಲ್ಲಿ ದೇವೇಗೌಡರು ನಿಸ್ಸಿಮರು: ಸಿಎಂ ಸಿದ್ದರಾಮಯ್ಯ

Sampriya
ಸೋಮವಾರ, 11 ನವೆಂಬರ್ 2024 (16:17 IST)
ರಾಮನಗರ: ಕರ್ನಾಟಕ ಮೂರು ಕ್ಷೇತ್ರಗಳ ಉಪ ಚುನಾವಣೆ ಕಾವು ದಿನೇ ದಿನೇ ರಂಗೇರುತ್ತಿದ್ದು, ಇಂದು ಬಹಿರಂಗ ಪ್ರಚಾರ ಸಂಜೆ 6ಕ್ಕೆ ಅಂತ್ಯವಾಗಲಿದೆ.  ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲ್ಲೂಕಿನ ದೊಡ್ಡಮಳೂರಿನಲ್ಲಿ ಕಾಂಗ್ರೆಸ್‌ ಸಮಾವೇಶದಲ್ಲಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ದೇವೇಗೌಡರು ಯಾವ ಒಕ್ಕಲಿಗ ನಾಯಕರನ್ನು ಬೆಳೆಸುವುದಿಲ್ಲ. ಅವರು ರಾಜಕೀಯವಾಗಿ ಇನ್ನೊಬ್ಬರನ್ನು ಮುಗಿಸುವುದರಲ್ಲಿ ಮತ್ತು ದ್ವೇಷ ರಾಜಕಾರಣ ಮಾಡುವುದರಲ್ಲಿ ನಂಬರ್ 1 ಎಂದು ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯನನ್ನು ನಾನು ಸಿಎಂ ಮಾಡಿದೆ ಅಂತ ಹೇಳುತ್ತಾರೆ. ಮಿಸ್ಟರ್ ದೇವೇಗೌಡ ನಿನ್ನನ್ನು ಸಿಎಂ ಮಾಡಿದ್ದು ಯಾರು? ನಾನು ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದರು.

ಅಳೋದು ನಮ್ಮ ಪರಂಪರೆ, ವಂಶಪಾರಂಪರ್ಯ ಅಂತಾರೆ, ಪಾಪ ಆ ನಿಖಿಲ್ ಗೂ ಅಳೋದನ್ನು ಕಲಿಸಿಬಿಟ್ಟಿದ್ದಾರೆ. ಹಾಸನದಲ್ಲಿ ನೀವು ಅಳಬೇಕು. ಅಲ್ಲಿ ಹೋಗಿ ದೇವೇಗೌಡ, ಕುಮಾರಸ್ವಾಮಿ ಅಳಬೇಕು. ಆದರೆ ಪಾಪ ಆ ಹೆಣ್ಣುಮಕ್ಕಳು ಅಳುತ್ತಿದ್ದಾರೆ. ದಯವಿಟ್ಟು ನೀವು ಯಾರೂ ಅವರ ಕಣ್ಣೀರಿಗೆ ಮರುಳಾಗಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನಾನು ಎರಡನೇ ಬಾರಿ ಸಿಎಂ ಸ್ಥಾನದಲ್ಲಿರುವುದಕ್ಕೆ ದೇವೇಗೌಡ ಅವರಿಗೆ ಹೊಟ್ಟೆ ಉರಿ. ದೇವೇಗೌಡರೇ ನಿಮ್ಮ ಹೊಟ್ಟೆ ಉರಿ ನಿಮ್ಮನ್ನೇ ಸುಡುತ್ತದೆ ಎಂದು ಸಿದ್ದರಾಮಯ್ಯ, ಮಾಜಿ ಪ್ರಧಾನಿ ವಿರುದ್ಧ ಕಿಡಿ ಕಾರಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಮಗಳು ಹಾಗೆಲ್ಲಾ ಮಾಡಲ್ಲ: ಉಗ್ರ ಮಹಿಳಾ ನಾಯಕಿ ಡಾ ಶಾಹೀನ್ ತಂದೆಯ ವಾದ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಬಸವನಗುಡಿ ಕಡಲೆಕಾಯಿ ಪರಿಷೆ ಯಾವಾಗ ಆರಂಭ, ಈ ಬಾರಿ ಹೊಸ ನಿಯಮವೇನು ಇಲ್ಲಿದೆ ವಿವರ

ಬಿಹಾರ ಚುನಾವಣೆ ನಂತರ ರಾಹುಲ್ ಗಾಂಧಿ ಭವಿಷ್ಯವೇ ಬದಲಾಗಬಹುದು

ಆಪರೇಷನ್ ಸಿಂಧೂರ್ ಗೆ ಮೊದಲು ಆಪರೇಷನ್ indoor ಮಾಡಬೇಕಿದೆ

ಮುಂದಿನ ಸುದ್ದಿ
Show comments