Select Your Language

Notifications

webdunia
webdunia
webdunia
webdunia

ಹೊಸ ಮೈಲ್ಲಿಗಲ್ಲು ಸಾಧಿಸಿದ ಇಂಧನ ಇಲಾಖೆ

ಹೊಸ ಮೈಲ್ಲಿಗಲ್ಲು ಸಾಧಿಸಿದ ಇಂಧನ ಇಲಾಖೆ
bangalore , ಗುರುವಾರ, 13 ಜುಲೈ 2023 (19:40 IST)
ಬೆಂಗಳೂರು-ಗೃಹಜ್ಯೋತಿ ಯೋಜನೆ  ಅರ್ಜಿ ಆರಂಭ ಆಗಿ ಕೇವಲ 17 ದಿನಗಳಲ್ಲಿ  ಒಂದು ಕೋಟಿ ನೋಂದಣಿಯಾಗಿದೆ.ಅತ್ಯಂತ ವೇಗದಲ್ಲಿ ರಾಜ್ಯದ ಜನರಿಗೆ ಗೃಹಜ್ಯೋತಿ ಯೋಜನೆ ತಲುಪುತ್ತಿದೆ.ದಿನದಿಂದ ‌ದಿನಕ್ಕೆ‌ ಅರ್ಜಿದಾರರ‌ ಸಂಖ್ಯೆ ಏರಿಕೆ ಆಗ್ತಿದೆ.ಒಟ್ಟು 10,635,340 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ.ನೆನ್ನೆಕ್ಕಿಂತ ಇಂದು‌ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಕ್ಕೆ  ಮಾಡಿದ್ದಾರೆ 
 
ಇನ್ನು ಯಾವ ಯಾವ ಎಸ್ಕಾಂಗಳಲ್ಲಿ ಎಷ್ಟು ಅರ್ಜಿ ನೊಂದಣಿ ಆಗಿದೆ ಎಂದು ನೋಡುವುದಾದರೆ
 
 ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 43,46,613 ಗ್ರಾಹಕರಿಂದ ಅರ್ಜಿ ಸಲ್ಲಿಕೆ‌ಯಾಗಿದೆ.ಚೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು  16,09,594 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ.ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 11,39,147ಲಕ್ಷ ಜನರಿಂದ ಅರ್ಜಿ ಸಲ್ಲಿಕೆಯಾಗಿದೆ.ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 22,78,255ಲಕ್ಷ ಗ್ರಾಹಕರಿಂದ‌ ಅರ್ಜಿ ಸಲ್ಲಿಕೆಯಾಗಿದೆ.ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 12,06,217ಲಕ್ಷ ಗ್ರಾಹಕರಿಂದ ಅರ್ಜಿ ಸಲ್ಲಿಕೆಯಾಗಿದೆ.HRECS ವ್ಯಾಪ್ತಿಯಲ್ಲಿ ಒಟ್ಟು 55,514 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ.ಇನ್ನು ಒಟ್ಟು ರಾಜ್ಯಾದ್ಯಂತ 1,೦6,35,340 ಗ್ರಾಹಕರಿಂದ ಅರ್ಜಿ ನೊಂದಣಿಯಾಗಿದೆ.
 
ಇಂದು ಕೂಡ ಹೆಚ್ಚಿನ‌ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ ಸಾದ್ಯತೆ ಇದೆ.ಗೃಹಜ್ಯೋತಿ ಯೋಜನೆ ಜುಲೈ ೧ ರಿಂದ  ಅನ್ವಯ  ಆಗಿರುವ ಹಿನ್ನೆಲೆ ಜುಲೈ ತಿಂಗಳ ಉಚಿತ ವಿದ್ಯುತ್ ಗೆ ಜುಲೈ25 ನೋಂದಣಿಯ ಕೊನೆಯ ದಿನಾಂಕವಾಗಿದೆ.ಜುಲೈ 25 ರ ನಂತರ ನೊಂದಣಿ ಮಾಡಿಸಿದ್ದಲ್ಲಿ ಆಗಸ್ಟ್ ತಿಂಗಳ ಬಿಲ್ ಅನ್ನು ಸೆಪ್ಟೆಂಬರ್ ಅಲ್ಲಿ ಪಡೆಯಬಹುದು.
 

Share this Story:

Follow Webdunia kannada

ಮುಂದಿನ ಸುದ್ದಿ

ಬಸವನಗುಡಿ ನಿವಾಸಿಗಳಿಗೆ ಎದುರಾಯ್ತು ಪಕ್ಷಿ ಕಂಟಕ!