ಆನ್ ಲೈನ್ ನಲ್ಲಿ ಏಜೆಂಟ್ ಎಂದು ಹೇಳಿ ಮೆಸೇಜ್ ಗಳು ಪಾರ್ವರ್ಡ್ ಮಾಡ್ತಿದ್ದ ಕಾಂಗ್ರೇಸ್ ಮುಖಂಡನ ನಂಬರ್ ಹಾಕಿ ಅಸಭ್ಯಕರ ಮೆಸೇಜ್ ಮಾಡಲಾಗ್ತಿದೆ.
ಚೀನಾ ಆಪ್ ನ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಲೋನ್ ಪಡೆದವರ ಮೊಬೈಲ್ ನಲ್ಲಿರುವ ಕಾಂಟಾಕ್ಟ್ ನಂಬರ್ ಗಳಿಗೆ ಅಶ್ಲೀಲ ಮೆಸೇಜ್ ಮಾಡಲಾಗ್ತಿದೆ.ದಾಸರಹಳ್ಳಿ ಕಾಂಗ್ರೇಸ್ ಮುಖಂಡ ಗಿಡ್ಡೆನಹಳ್ಳಿ ಶಶಿಕುಮಾರ್ ಎಂಬುವವರ ಫೊಟೋ ಬಳಸಿ ಅಸಭ್ಯ ಮೆಸೇಜ್ ಮಾಡ್ತಿದ್ದು, ಶಶಿಕುಮಾರ್ ಅವರ ನಂಬರ್ ಹಾಕಿ ಸೆಕ್ಸ್ ಏಜೆಂಟ್ ಎಂದು ಫಾರ್ವರ್ಡ್ ಮೆಸೇಜ್ ಮಾಡ್ತಿದ್ದು,ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರು ದಾಖಲಾಗಿದೆ.ಬೆಂಗಳೂರು ಸಿಟಿ ಪೊಲೀಸ್ ಪೇಜ್ ಗೆ ಶಶಿಕುಮಾರ್ ದೂರು ನೀಡಿದ್ದಾರೆ.