Select Your Language

Notifications

webdunia
webdunia
webdunia
webdunia

ಪೊಲೀಸರೆಂದು ಹೇಳಿ ಯುವತಿಯರಿಗೆ ಲೈಂಗಿಕ ಸುಖದ ಬೇಡಿಕೆ ಇಟ್ಟ ಭೂಪರು

ಪೊಲೀಸರೆಂದು ಹೇಳಿ ಯುವತಿಯರಿಗೆ ಲೈಂಗಿಕ ಸುಖದ ಬೇಡಿಕೆ ಇಟ್ಟ ಭೂಪರು
ದಾವಣಗೆರೆ , ಶುಕ್ರವಾರ, 6 ಸೆಪ್ಟಂಬರ್ 2019 (16:05 IST)
ಪೊಲೀಸ್ ಅಂತ ಹೇಳಿರೋ ಖದೀಮರಿಬ್ಬರು ಪಾರ್ಕಿನಲ್ಲಿ ಕುಳಿತಿದ್ದ ಯುವತಿಯನ್ನ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿರೋ ಘಟನೆ ನಡೆದಿದೆ.

ಪೊಲೀಸರೆಂದು ಹೇಳಿಕೊಂಡು ಯುವತಿಯೊಬ್ಬಳನ್ನು ಹೆದರಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಇಬ್ಬರು ಕಾಮುಕರನ್ನು ಮಹಿಳಾ ಠಾಣೆ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ಯುವತಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಇಬ್ಬರು ಆರೋಪಿಗಳು ಅಂದರ್ ಆಗಿದ್ದಾರೆ.

webdunia
ದಾವಣಗೆರೆ ​ನಗರದ ನಿಟ್ಟುವಳ್ಳಿಯ ಮಲ್ಲಿಕಾರ್ಜುನ್, ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಕೆ. ಎನ್. ಸುರೇಶ್ ಬಂಧಿತರು. ಈ ಆರೋಪಿಗಳನ್ನು ನಗರದ ಎಸ್.ವಿ.ಎಸ್. ಕಾನ್ವೆಂಟ್ ಬಳಿ ಬಂಧಿಸಲಾಗಿದೆ.

webdunia
ಆಗಸ್ಟ್ 23 ರಂದು ದಾವಣಗೆರೆಯ ತುಂಗಾಭದ್ರಾ ಬಡಾವಣೆಯ ಮುಂಭಾಗದಲ್ಲಿರುವ ದೈವಿಕ್ ಮೋತಿ ಪಿ. ರಾಮರಾವ್ ನಗರದಲ್ಲಿ ಹರಪನಹಳ್ಳಿ ಮೂಲದ ಯುವತಿ ತನ್ನ ಸ್ನೇಹಿತೆ ಜೊತೆ ಕುಳಿತಿದ್ದಳು.

ಈ ವೇಳೆ ಪೊಲೀಸರೆಂದು ಹೇಳಿಕೊಂಡು ಬಂದ ಮಲ್ಲಿಕಾರ್ಜುನ್ ಹಾಗೂ ಸುರೇಶ್ ಯುವತಿಯರನ್ನು ಠಾಣೆಗೆ ಕರೆದೊಯ್ಯುವುದಾಗಿ ಹೇಳಿಕೊಂಡು ಬೇರೆಡೆಗೆ ಕರೆದೊಯ್ದಿದ್ದರು. ಈ ವೇಳೆ ಆ ಇಬ್ಬರು ಯುವತಿಯರನ್ನು ಬೇರೆ ಬೇರೆ ಮಾಡಿ ನಾಗನೂರಿನ ಬಿಸ್ಲೇರಿಗೆ ಹೋಗುವ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿಗೆ ಹೆದರಿಸಿ ಲೈಂಗಿಕವಾಗಿ ಸಹಕರಿಸುವಂತೆ ಆರೋಪಿಗಳು ಪೀಡಿಸಿದ್ದರಂತೆ. ಅಲ್ಲದೇ, ಯುವತಿಯ ಸಂಬಂಧಿಗೆ ಕರೆ ಮಾಡಿ, ಆಕೆಯ ಸ್ನೇಹಿತೆಯನ್ನು ಬಿಡಲು 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಬಳಿಕ ಯುವತಿ ಮೊಬೈಲ್ ಕಸಿದುಕೊಂಡು ಹೋಗಿದ್ದರು.

ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್​, ನಗರ ಉಪವಿಭಾಗದ ಪ್ರಭಾರ ಸಬ್​ ಇನ್​ಸ್ಪೆಕ್ಟರ್ ಮಂಜುನಾಥ್ ಗಂಗಲ್ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕಿ ನಾಗಮ್ಮ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಖಾಲಿ ಇರುವ ಹುದ್ದೆಗಳು ಶ್ರೀಘ್ರದಲ್ಲಿ ಭರ್ತಿ: ಪ್ರಭು ಚೌಹಾಣ್