Select Your Language

Notifications

webdunia
webdunia
webdunia
webdunia

ನಾಮಧಾರಿಗೆ ‘ಕೈ’ ಟಿಕೆಟ್ ನೀಡುವಂತೆ ಆಗ್ರಹ

Demand to give 'hand' ticket to nominee
ಉತ್ತರ ಕನ್ನಡ , ಶುಕ್ರವಾರ, 31 ಮಾರ್ಚ್ 2023 (18:48 IST)
ಉತ್ತರ ಕನ್ನಡದಲ್ಲಿ 2-3 ಕ್ಷೇತ್ರಗಳಲ್ಲಿ ನಾಮಧಾರಿ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ನಾಮಧಾರಿ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಮಧಾರಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯವನ್ನು ಕಡೆಗಣಿಸದೇ ಕಾಂಗ್ರೆಸ್​ ಟಿಕೆಟ್ ನೀಡುವಂತೆ ಶ್ರೀಗಳು ಒತ್ತಾಯಿಸಿದ್ದಾರೆ.. ಮಾಜಿ ಸಚಿವ R.V ದೇಶಪಾಂಡೆ ವಿರುದ್ಧ ಪ್ರಣವನಾಂದ ಸ್ವಾಮಿ ಆಕ್ರೋಶ ಹೊರಹಾಕಿದ್ದು, R.V ದೇಶಪಾಂಡೆ ರಾಜಕೀಯವಾಗಿ ಸಮುದಾಯವನ್ನ ಮುಗಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.
 
ಹಿಂದುಳಿದ ನಾಮಧಾರಿಗಳನ್ನ ತುಳಿದು ಮೇಲ್ವರ್ಗದವರಿಗೆ ಮಣೆ ಹಾಕುತ್ತಿದ್ದಾರೆ‌.. ಈ ಬಾರಿ ಕಾಂಗ್ರೆಸ್​​ ಟಿಕೆಟ್ ನೀಡದಿದ್ದಲ್ಲಿ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಬೇಕಾಗುತ್ತದೆ‌ ಎಂದು ಪ್ರಣವಾನಂದ ಸ್ವಾಮಿಗಳು ಎಚ್ಚರಿಸಿದ್ದಾರೆ.. ಈ ವಿಚಾರವಾಗಿ ಶ್ರೀಗಳು ಈಗಾಗಲೇ KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಸ್ವಾಮೀಜಿ ತಯಾರಿ ನಡೆಸಿದ್ದು, ಕಾಂಗ್ರೆಸ್ ಟಿಕೆಟ್ ನೀಡದೆ ಹೋದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಧ್ವಜಹಾರಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ