Publish Date: Wed, 30 Aug 2023 (16:38 IST)
Updated Date: Wed, 30 Aug 2023 (17:43 IST)
ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಮುಂಬೈನಲ್ಲಿ INDIA ವಿಪಕ್ಷ ಮೈತ್ರಿಕೂಟ ಸಭೆಯನ್ನು ಆಯೋಜನೆ ಮಾಡಲಾಗಿದೆ. ಈ ವೇಳೆ ಸಭೆಯಲ್ಲಿ ಲಾಂಛನ ಅನಾವರಣ ಮಾಡಲು ನಿರ್ಧಾರ ಮಾಡಲಾಗಿದೆ. ಆಗಸ್ಟ್ 31ರಂದು ಮುಂಬೈನಲ್ಲಿ ಹೊಸದಾಗಿ ಪ್ರತಿಪಕ್ಷ ರಚಿಸಲಾಗಿತ್ತು. ಒಕ್ಕೂಟದ ಮೂರನೇ ಸಭೆಯಲ್ಲಿ ಸುಮಾರು 26ರಿಂದ 27 ಪಕ್ಷಗಳು ಭಾಗವಹಿಸುವ ಸಾಧ್ಯತೆ ಇದೆ. ಸುಮಾರು 26ರಿಂದ 27 ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ. ಆಗಸ್ಟ್ 31ರ ಸಂಜೆ ಮುಂಬೈನಲ್ಲಿ ಅನೌಪಚಾರಿಕ ಸಭೆ ನಡೆಯಲಿದೆ. ಸೆಪ್ಟೆಂಬರ್ 1ರಂದು ಔಪಚಾರಿಕ ಸಭೆ ನಡೆಯಲಿದೆ. ಇಲ್ಲಿಯವರೆಗೆ, ಎರಡು ಸಭೆಗಳನ್ನ ಆಯೋಜಿಸಲಾಗಿದೆ. ಮೂರನೇ ಸಭೆಯಲ್ಲಿ ಮುಂದಿನ ಕಾರ್ಯಸೂಚಿಯನ್ನ ಚರ್ಚೆ ಮಾಡಲಾಗುವುದು. ಸಭೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ತೆರಳಲಿದ್ದಾರೆ.