Publish Date: Wed, 30 Aug 2023 (14:20 IST)
Updated Date: Wed, 30 Aug 2023 (14:32 IST)
ಒಂದು ಕಡೆ ಗೃಹಲಕ್ಷ್ಮೀ ಯೋಜನೆಗೆ ಅದ್ಧೂರಿ ಚಾಲನೆ ನೀಡಲಾಗ್ತಿದೆ.ಮತ್ತೊಂದು ಕಡೆ ಗೃಹಲಕ್ಷ್ಮೀ ಯೋಜನೆಗೆ ಪ್ರತಿಭಟನೆ ಬಿಸಿ ತಟ್ಟಿದೆ.ಯೋಜನೆ ಜಾರಿ ದಿನವೇ ಮಹಿಳೆಯರಿಂದ ಮೌನ ಪ್ರತಿಭಟನೆ ಮಾಡಿದ್ದಾರೆ.
ಅನೇಕಲ್ ನ್ನ ಮಂಟಪ ಗ್ರಾಮ ಪಂಚಾಯತಿ ಬಳಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ಮಾಡಿದ್ದಾರೆ.ಗ್ರಾಮ ಪಂಚಾಯತಿ ಆಧ್ಯಕ್ಷನಿಂದ ಮಹಿಳೆಯರು ನಿಂಧಿಸಿದ್ದಾರೆ.ಪ್ರವೀಣ್ ಕುಮಾರ್ ಮಂಟಪ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದು,ಗ್ರಾಮ ಪಂಚಾಯತಿಯಲ್ಲಿ ಮಾಸಿಕ ಸಭೆ ನಡೆಸುವ ವಿಚಾರಕ್ಕೆ ಒಕ್ಕೂಟದ ಮಹಿಳಾ ಸದಸ್ಯರನ್ನು ನಿಂದಿಸಿದ ಆರೋಪದಾಡಿ ಸಭೆಗೆ ಗ್ರಾಮ ಪಂಚಾಯತಿ ಸಭಾಂಗಣ ನೀಡುವುದಿಲ್ಲ ಎಂದು ಅನುಚಿತ ವರ್ತನೆ ತೋರಿದ್ದಾರೆ.ವಾಟರ್ ಮ್ಯಾನ್ ಕರೆದು ಹೊರದಬ್ಬುವಂತೆ ಸೂಚನೆ ನೀಡಿದ್ದಾರೆ.ಹೀಗಾಗಿ ಮಹಿಳೆಯರಿಗೆ ಗೌರವ ನೀಡದಕ್ಕೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ.