Select Your Language

Notifications

webdunia
webdunia
webdunia
webdunia

ಸಚಿವ ಜಾರ್ಜ್ ನಿವಾಸದ ಎದುರು ಪ್ರತಿಭಟನೆಗೆ ನಿರ್ಧಾರ

ಸಚಿವ ಜಾರ್ಜ್ ನಿವಾಸದ ಎದುರು ಪ್ರತಿಭಟನೆಗೆ ನಿರ್ಧಾರ
bangalore , ಸೋಮವಾರ, 20 ನವೆಂಬರ್ 2023 (14:21 IST)
ನಿನ್ನೆ ಕಾಡುಗೋಡಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದು ತಾಯಿ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಪ್ರಕರಣದ ಹಿನ್ನೆಲೆಯಲ್ಲಿ, ಮೃತಳ ಸಂಬಂಧಿಕರು ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳ ಸಾವಿಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಮೃತ ಸೌಂದರ್ಯ ಅವರ ಚಿಕ್ಕಮ್ಮ ಸುಜಾತ ಆರೋಪಿಸಿದ್ದಾರೆ.
ಬೆಸ್ಕಾಂ ಅಧಿಕಾರಿಗಳ ವಿರುದ್ದ ದೂರು ದಾಖಲಿಸಲು ಹೋದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೀರಾ ನಿರ್ಲಕ್ಷದಿಂದ ವರ್ತಿಸಿದ್ದಾರೆ.

ತಾವು ಪರಿಹಾರದ ಹಣಕ್ಕಾಗಿ ದೂರು ಕೊಡಲು ಬಂದಿದ್ದೇವೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.ಘಟನೆ ನಡೆದು 24 ಗಂಟೆಗಳಾದರೂ ಯಾವುದೇ ಅಧಿಕಾರಿ ಸೌಜನ್ಯಕ್ಕಾದರೂ ಮೃತರ ನಿವಾಸಕ್ಕೆ ಭೇಟಿ ನೀಡಿಲ್ಲ ಎಂದು ಸೌಂದರ್ಯ ಚಿಕ್ಕಮ್ಮ ಆರೋಪಿಸಿದರು. ಈ ವೇಳೆ ಸಾರ್ವಜನಿಕರ ವರ್ತನೆಯ ಬಗ್ಗೆಯೂ ಸೌಂದರ್ಯ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಾರು ಎರಡುಗಂಟೆಗಳ ಕಾಲ ವಿದ್ಯುತ್ ಸ್ಪರ್ಶವಾಗಿ ತಾಯಿ ಮಗು ಹೊತ್ತಿ ಉರಿಯುತ್ತಿದ್ದರೂ ಯಾರೂ ಅವರ ನೆರವಿಗೆ ಧಾವಿಸಲಿಲ್ಲ.

ಬದಲಿಗೆ ಸುತ್ತಲೂ ನಿಂತು ಮೊಬೈಲ್​ ನಲ್ಲಿ ದೃಷ್ಯವನ್ನು ಸೆರೆಹಿಡಿಯುವಲ್ಲಿ ಮಗ್ನರಾಗಿದ್ದರು ಎಂದು ಸೌಂದರ್ಯ ಚಿಕ್ಕಮ್ಮ ಸುಜಾತ ಬೇಸರ ವ್ಯಕ್ತಪಡಿಸಿದ್ದಾರೆ.ಸೌಂದರ್ಯ, ಪರೀಕ್ಷೆಗೆ ಹಾಜರಾಗಬೇಕಾಗಿತ್ತು. ಪರೀಕ್ಷೆಗೆ ತಯಾರಿ ನಡೆಸುವ ಸಲುವಾಗಿಯೇ 9 ತಿಂಗಳ ಬಾಣಂತಿ ಮಗುವಿನೊಂದಿಗೆ ಪತಿಯ ಮನೆಯಿಂದ ಬಂದಿದ್ದರು. ರಸ್ತೆ ಬದಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು, ವಿದ್ಯುತ್ ಪ್ರವಹಿಸಿ, ತಾಯಿ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದರು.




ಕಾಡುಗೋಡನಹಳ್ಳಿಯಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಮಗು ಮೃತಪಟ್ಟ ಪ್ರಕರಣ ಹಿನ್ನೆಲೆಯಲ್ಲಿ, ಮೃತದೇಹಗಳನ್ನು ಇಂಧನ ಸಚಿವ ಕೆ.ಜೆ.ಜಾರ್ಜ್​ ಮನೆ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ಮೃತರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದಲೇ ಸೌಂದರ್ಯ ಮತ್ತು ಅವರ 9 ತಿಂಗಳ ಮಗು ಧಾರುಣವಾಗಿ ಸಾಯಬೇಕಾಯ್ತು. ಹಾಗಾಗಿ ಬೆಸ್ಕಾಂ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮೃತ ಸೌಂದರ್ಯ ಅವರ ಸಂಬಂಧಿಕರು ಒತ್ತಾಯಿಸಿದ್ದಾರೆ.

ಈಗ ವೈದೇಹಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಬಳಿಕ ವೈದೇಹಿ ಆಸ್ಪತ್ರೆಯಿಂದ ಮೃತದೇಹಗಳನ್ನು ನೇರವಾಗಿ ಜಾರ್ಜ ಮನೆಗೆ ಕೊಂಡೊಯ್ಯಲು ಉದ್ದೇಶಿಸಿರುವುದಾಗಿ ಸೌಂದರ್ಯ ಸಂಬಂಧಿಕರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗೆ ಬಂದ ಸೊಸೆಯ ಮೇಲೆ ಅತ್ಯಾಚಾರವೆಸಗಿ ಮಾವ ಪರಾರಿ