ನಿತ್ಯಾನಂದನ ಶಿಷ್ಯರಿಂದ ಪ್ರಾಣ ಬೆದರಿಕೆ: ಯಾಕೆ ಗೊತ್ತಾ?

Webdunia
ಶುಕ್ರವಾರ, 5 ಅಕ್ಟೋಬರ್ 2018 (17:00 IST)
ಟಿ. ರಂಜಿತಾ ದಾಖಲಿಸಿದ್ದ ಪ್ರಕರಣ ಸಂಬಂಧ ರಾಮನಗರ ಸಿವಿಲ್ ಕೋರ್ಟ್‌ಗೆ ವಿಚಾರಣೆಗೆಂದು ಆಗಮಿಸಿದ್ದ ಆರತಿರಾವ್ ಹಾಗೂ ಲೆನಿನ್ ಕುರುಪ್ಪನ್ ಮೇಲೆ ಬಿಡದಿ ನಿತ್ಯಾನಂದ ಸ್ವಾಮಿಯ ನಿತ್ಯಾನಂದನ ಅನುಯಾಯಿಗಳು ಅನೂಚಿತ ವರ್ತನೆ ತೋರಿದಲ್ಲದೇ ಪ್ರಾಣ ಬೆದರಿಕೆ ಹಾಕಿದ ಘಟನೆ ನಡೆದಿದೆ.  

ರಾಮನಗರದ ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಹಾಗೂ ನಟಿ ರಂಜಿತಾ ನಡೆಸಿದ್ದ ರಾಸಲೀಲೆಯ ಸಿಡಿ ಬಿಡುಗಡೆಗೂ ಮುನ್ನ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂದು ನಟಿ ರಂಜಿತಾ ಪ್ರಕರಣ ದಾಖಲಿಸಿದ್ದರು.  ಇನ್ನು ಈ ಪ್ರಕರಣದ ವಿಚಾರಣೆಗೆಂದು ರಾಮನಗರದ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದ ಆರತಿರಾವ್ ಹಾಗೂ ಲೆನಿನ್ ಕುರುಪ್ಪನ್ ಅವರ ಚಿತ್ರೀಕರಣಕ್ಕೆ ನಿತ್ಯಾನಂದನ ಮೂವರು ಶಿಷ್ಯರು ಮುಂದಾದರು.

ಈ ಬಗ್ಗೆ ಆರತಿರಾವ್ ಹಾಗೂ ಲೆನಿನ್ ನಿತ್ಯ ಶಿಷ್ಯರನ್ನ ಪ್ರಶ್ನೆ ಮಾಡಿದಕ್ಕೆ ಅನುಚಿತ ವರ್ತನೆ ತೋರಿದ ನಿತ್ಯಾನಂದ ಶಿಷ್ಯರು ಇಬ್ಬರಿಗೂ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಅನ್ನೋ ಅರೋಪ ಇದೆ. ಇನ್ನು ಕೋರ್ಟ್ ಆವರಣದಲ್ಲಿಯೇ ನಡೆಯುತ್ತಿದ್ದ ಘಟನೆ ನೋಡಿದ ಕೋರ್ಟ್‌ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಐಜೂರು ಪೊಲೀಸರು ಓರ್ವ ನಿತ್ಯಾನಂದನ ಶಿಷ್ಯನನ್ನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆರತಿರಾವ್ ಹಾಗೂ ಲೆನಿನ್ ಕುರುಪ್ಪನ್ , ಪ್ರಾಣ ಬೆದರಿಕೆ ಹಾಕಿರುವ ನಿತ್ಯಾನಂದನ ಮೂವರು ಶಿಷ್ಯಂದಿರ ವಿರುದ್ಧ ದೂರು ದಾಖಲಿಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಧಾನಿಯ ರಸ್ತೆ ಗುಂಡಿಯನ್ನು ವಾರದೊಳಗೆ ಮುಚ್ಚಿ: ಅಧಿಕಾರಿಗಳಿಗೆ ಸಿದ್ದರಾಮಯ್ಯ ತಾಕೀತು

ಟೀಚರ್ ಎನ್ನಲೂ ನಾಲಾಯಕ್, ಚಿತ್ರದುರ್ಗದ ಸಂಸ್ಕೃತ ಶಿಕ್ಷಕ ಬಾಲಕನಿಗೆ ಕಾಲಿನಿಂದ ಒದ್ದ ವಿಡಿಯೋ

ಜಪಾನ್‌ನಲ್ಲಿ ಹೊಸ ಇತಿಹಾಸ ಬರೆದ ಸನೇ ಟಕೈಚಿ, ಮೋದಿಯಿಂದ ಅಭಿನಂದನೆ

ಕಾಂಗ್ರೆಸ್ ಸರ್ಕಾರದ ನಡೆಯಿಂದ ಇರುವ ಕಂಪೆನಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ವಿಷಯ: ಸುಧಾಕರ್ ಕಿಡಿ

ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನಾ ಮರೆತ್ರಾ: ಕೆದಿಕಿದ ರಾಘವೇಂದ್ರಗೆ ಪ್ರಿಯಾಂಕ್ ಖರ್ಗೆ ಕೌಂಟರ್

ಮುಂದಿನ ಸುದ್ದಿ
Show comments