Webdunia - Bharat's app for daily news and videos

Install App

ಅಪ್ಪು ಅಭಿಮಾನಿಗಳ ಸಾವಿನ ಸಂಖ್ಯೆ ಏರಿಕೆ

Webdunia
ಬುಧವಾರ, 3 ನವೆಂಬರ್ 2021 (20:29 IST)
ಅಪ್ಪು ಅಭಿಮಾನಿಗಳ ಸಾವಿನ ಸಂಖ್ಯೆ ಏರಿಕೆಯಾಗ್ತಿದೆ. ಒಂದೇ ದಿನದಲ್ಲಿ ತುಮಕೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ರೆ, ದಾವಣಗೆರೆಯಲ್ಲಿ ಮತ್ತೊಬ್ಬ ಕೊನೆಯುಸಿರು ಎಳೆದಿದ್ದಾನೆ. ಹೆಬ್ಬೂರಿನ ಕೋಡಿಪಾಳ್ಯ ಗ್ರಾಮದ ಭರತ್ ಎಂಬಾತ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾನು ಅಪ್ಪು ಅಭಿಮಾನಿ, ಅಪ್ಪು ಸಾವು ಸಹಿಸಲಾಗುತ್ತಿಲ್ಲ.. ಅಪ್ಪು ಹೋದ ಜಾಗಕ್ಕೆ ನಾನು ಹೋಗ್ತಿದ್ದೇನೆ. ಅಪ್ಪುನಂತೆ ನನ್ನ ಕಣ್ಣು ಸಹ ದಾನ ಮಾಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಕೊನೆಗೆ ಭರತ್ ಆಸೆಯಂತೆ, ಕುಟುಂಬಸ್ಥರು ಕಣ್ಣು ದಾನ ಮಾಡಿದ್ದಾರೆ. ತುಮಕೂರಿನ ಹಿರೇಹಳ್ಳಿಯ ಅಪ್ಪು ಶ್ರೀನಿವಾಸ್ ಎಂಬಾತ ಅಪ್ಪು ಅಂತಿಮ ದರ್ಶನ ಪಡೆದು ಮನೆಗೆ ಮರಳಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಕೊನೆಯುಸಿರು ಎಳೆದಿದ್ದಾನೆ. 
ಇನ್ನೂ ದಾವಣಗೆರೆಯಲ್ಲಿ ಪುನೀತ್ ನಿಧನದ ದಿನದಿಂದ ಖೀನತೆಗೊಳಗಾಗಿದ್ದ ಸಿ. ಕುಮಾರ್ ಎಂಬ ಅಭಿಮಾನಿ ನೇಣಿಗೆ ಶರಣಾಗಿದ್ದಾನೆ. ಅಪ್ಪು ಅಪ್ಪಟ ಅಭಿಮಾನಿಯಾಗಿದ್ದ ಕುಮಾರ್, ಅಪ್ಪು ನಟಿಸಿರೋ ಸಿನಿಮಾ ಒಂದೂ ಬಿಡದೆ ನೋಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದೇ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ

70 ಗಂಟೆ ಕೆಲಸ ಮಾಡಲು ರೆಡಿಯಾ: ನಾರಾಯಣ ಮೂರ್ತಿ ಹೇಳಿಕೆಯಿಂದ ಟ್ರೋಲ್‌ಗೊಳಗಾದ ರಿಷಿ ಸುನಕ್‌

ನಾನು ಪಕ್ಷಾಂತರ ಮಾಡಲ್ಲ, ನನ್ನದು ತಟಸ್ಥ ನಿಲುವು: ಜಿಟಿ ದೇವೇಗೌಡ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments