Publish Date: Sat, 09 Dec 2017 (11:04 IST)
Updated Date: Sat, 09 Dec 2017 (11:12 IST)
ಮೈಸೂರು: ಅಕ್ರಮ ಸಂಬಂಧ ಜೀವಕ್ಕೆ ಕುತ್ತು ತರುತ್ತದೆ ಎನ್ನುವುದಕ್ಕೆ , ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದ ಅಕ್ರಮ ಸಂಬಂಧ ವಿಟ್ಟುಕೊಂಡಿರುವ ಪ್ರಿಯಕರನಿಂದ ಗೃಹಿಣಿ ಹತ್ಯೆಕೊಳಗಾದ ಘಟನೆಯೆ ಸಾಕ್ಷಿ.
ಮಾರುತಿ ಬಡಾವಣೆಯ ನಿವಾಸಿ ಜ್ಯೋತಿ(29) ಎಂಬುವವರು ತನ್ನ ಪ್ರಿಯಕರನಾದ ಪ್ರವೀಣ್ ಎಂಬುವವನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದರು. ಇತ ಹುಣಸೂರು ಪಟ್ಟಣದ ನಿವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ಇವರಿಬ್ಬರ ನಡುವೆ ಅಕ್ರಮ ಸಂಬಂಧವಿತ್ತು. ಜ್ಯೋತಿ ಯವರು ತಡರಾತ್ರಿ ಪ್ರವೀಣ್ ರವರ ಮನೆಗೆ ಬಂದು ಜಗಳವಾಡಿದ್ದ ಕಾರಣ ಆಕ್ರೋಶಗೊಂಡ ಪ್ರವೀಣ್ ಬೆಳಿಗ್ಗೆ ಜ್ಯೋತಿಯವರ ಮನೆಗೆ ಹೋಗಿ ಅವರ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ
ನಂತರ ಕೊಲೆ ಮಾಡಿದ ಪ್ರವೀಣ್ ಪ್ರಶಾಂತ್ ಲಾಡ್ಜ್ ಮೇಲೆ ಹೋಗಿ, ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುದಾಗಿ ಬೆದರಿಕೆ ಒಡ್ಡಿದ್ದಾನೆ. ಕೂಡಲೆ ಸ್ಥಳಕ್ಕೆ ಬಂದ ಆತನ ತಂದೆ ಪ್ರವೀಣ್ ಮನವೂಲಿಸಿ ಕೆಳಗಿಳಿಸಿದರು. ಹುಣಸೂರು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ