ಮುಂಬೈನಿಂದ ಈ ತಾಲ್ಲೂಕಿಗೆ ವಕ್ಕರಿಸಿದ ಡೆಡ್ಲಿ ವೈರಸ್

Webdunia
ಶನಿವಾರ, 6 ಜೂನ್ 2020 (14:08 IST)
ಮುಂಬೈನಿಂದ ಬಂದ ವ್ಯಕ್ತಿಯೊಬ್ಬನಿಂದ ಈ ತಾಲೂಕಿನಲ್ಲಿ ಡೆಡ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.  

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಿಪ್ಪಾಪುರ ತಾಂಡಾದ 28 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಸೋಂಕಿತ ವ್ಯಕ್ತಿ ಮುಂಬೈನ ಹೋಟೆಲ್‌ವೊಂದರದಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬ ಸಮೇತರಾಗಿ ಜೂನ್ 2ರಂದು ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದು ಗೌರಿಬಿದನೂರಿನಲ್ಲಿ ಇಳಿದಿದ್ದರು.

ಇವರನ್ನು ಆಂಬುಲೆನ್ಸ್ ಮೂಲಕ ಮಧುಗಿರಿ ಆಸ್ಪತ್ರೆಯಲ್ಲಿ ದಾಖಲಿಸಿ ಅಲ್ಲಿಂದ ಬೇಡತ್ತೂರು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಜೂ.4ರಂದು ಕಫ ಮತ್ತು ಗಂಟಲು ಸ್ರಾವದ ಮಾದರಿಗಳ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಬೈನಿಂದ ಇವರ ಜತೆ ಬಂದ ನಾಲ್ಕು ಮಂದಿ ಕುಟುಂಬ ಸದಸ್ಯರು ಹಾಗೂ ಊರುಕೆರೆ ವ್ಯಕ್ತಿಯೊಬ್ಬರು ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಈ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ, ಕೇರಳ ಭಾಷಾ ವಿವಾದ: ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯೆ

ಪ್ರೀತಿ ತಿರಸ್ಕರಿಸಿದ ಯುವತಿಗೆ ಪಾಗಲ್ ಪ್ರೇಮಿಯ ಕಾಟ, ಕೊನೆಗೂ ವಶಕ್ಕೆ

ಗಂಡ ಹತ್ಯೆಯಾದ ವರ್ಷದ ಬೆನ್ನಲ್ಲೇ ಪತ್ನಿ ಶೂಟೌಟ್‌ನಲ್ಲಿ ಹತ್ಯೆ

ಕೇರಳ, ಕರ್ನಾಟಕ ನಡುವೆ ತೀವ್ರಗೊಂಡಿರುವ ಭಾಷಾ ವಿವಾದ ಏನಿದು

ಅಯೋದ್ಯೆಯ ರಾಮಮಂದಿರದ ಸಂಕಿರ್ಣದೊಳಗೆ ನಮಾಜ್ ಮಾಡಲು ಹೋದ ಮುಸ್ಲಿಂ ವ್ಯಕ್ತಿ

ಮುಂದಿನ ಸುದ್ದಿ
Show comments