ಬೆಂಗಳೂರಿನ ಭಾರತಿ ನಗರದ ಬಿಬಿಎಂಪಿ ನರ್ಸರಿ ಶಾಲೆ ಕುಸಿತ ಹಿನ್ನೆಲೆ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ-ಕಾಲೇಜುಗಳ ಕಟ್ಟಡಗಳ ಗುಣ್ಣಮಟ್ಟದ ಪರೀಕ್ಷೆ ಮಾಡಿ, ವರದಿ ನೀಡಲು ಬಿಬಿಎಂಪಿ ಸೂಚನೆ ನೀಡಿದೆ. ಡಿಸೆಂಬರ್ 5 ರೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಸೂಚಿಸಿದೆ.
ಪಾಲಿಕೆ ಶಾಲಾ ಕಟ್ಟಡದ ಗುಣ್ಣಮಟ್ಟದ ವರದಿ ನೀಡಲು ಅಧಿಕಾರಿಗಳಿಗೆ ಇಂದು ಡೆಡ್ಲೈನ್ ಕೊಟ್ಟಿದೆ. ಈ ಹಿಂದೆ ವಿಶೇಷ ಆಯುಕ್ತರು ಎರಡು ದಿನಗಳೊಳಗೆ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದ್ದರು. ಅದಕ್ಕೆ ಅಧಿಕಾರಿಗಳು ಕ್ಯಾರೇ ಎಂದಿರಲ್ಲಿಲ್ಲ. ನಂತರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ , ಡಿಸೆಂಬರ್ 5ಕ್ಕೆ ವರದಿ ನೀಡುವಂತೆ ಆದೇಶಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 87 ನರ್ಸರಿ ಹಾಗೂ ಶಾಲಾ ಕಾಲೇಜುಗಳ ಕಟ್ಟಡಗಳಿವೆ. ಇನ್ನು ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಶಾಲಾ ಕಾಲೇಜು ಹಾಗೂ ಆಸ್ಪತ್ರೆ ಕಟ್ಟಡಗಳ ಸ್ಥಿರತೆ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿ ಸೂಚಿಸಿದೆ.