Publish Date: Mon, 21 Oct 2019 (17:20 IST)
Updated Date: Mon, 21 Oct 2019 (17:21 IST)
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಡಿಸಿಎಂ ಸಖತ್ ಟಾಂಗ್ ನೀಡಿದ್ದಾರೆ.
ಡಿಕೆ ಶಿವಕುಮಾರ್ ರ ದೆಹಲಿ ಮನೆ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರೋ ಡಿಸಿಎಂ ಅಶ್ವಥ್ ನಾರಾಯಣ್, ಕಾನೂನು ವ್ಯವಸ್ಥೆ ಪಾಲನೆಯಾಗುತ್ತಿದೆ ಅಷ್ಟೇ. ಇದು ಯಾರ ವಿರುದ್ಧವೂ ನಡೆಯುತ್ತಿರುವ ಕ್ರಮ ಅಲ್ಲ. ಸಮಾಜದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ನಾವು ಚಿಂತಿಸಬಾರದು. ಉತ್ತಮ ಸಮಾಜ ಕಟ್ಟುವುದಕ್ಕೆ ಮುಂದಾಗಬೇಕು ಎಂದಿದ್ದಾರೆ.
ನನ್ನಂತಹವರು ನೂರು ಜನ ಬರ್ತಾರೆ, ಹೋಗ್ತಾರೆ. ಆದರೆ ಉತ್ತಮ ಸಮಾಜ ಕಟ್ಟಿದರೆ ನ್ಯಾಯ ಉಳಿಯುತ್ತದೆ. ಉಪಚುನಾವಣೆ ದೃಷ್ಟಿಯಿಂದ ಡಿಕೆಶಿ ಬಂಧನವಾಗಿದೆ ಅನ್ನೋ ವಿಚಾರ ಕುರಿತು ಮಾತನಾಡಿ, ಯಾರು ಯಾರ ಶಕ್ತಿ ಏನೆಂದು ಜನರಿಗೆ ಗೊತ್ತಿದೆ. ನಾವು ಒಬ್ಬರಿಗೆ ಅಷ್ಟೋಂದು ಬಿಲ್ಡಪ್ ಕೊಡೋದು ಬೇಕಿಲ್ಲ.
ನನ್ನ ತಮ್ಮನ ಮೇಲೂ 10 ಬಾರಿ ಐಟಿ ದಾಳಿ ನಡೆದಿತ್ತು. ಅದನ್ನ ಕಾನೂನು ದುರ್ಬಳಕೆ ಅನ್ನೋಕಾಗುತ್ತಾ? ಕಾನೂನು ಬಳಕೆಯಾಗಬೇಕಿದೆ, ಬಳಕೆಯೇ ಆಗಿಲ್ಲ ಅಂದ್ರೆ ನ್ಯಾಯ ಹೇಗೆ ಉಳಿಯುತ್ತದೆ ಎಂದಿದ್ದಾರೆ.