Publish Date: Sat, 19 Oct 2019 (15:18 IST)
Updated Date: Sat, 19 Oct 2019 (15:21 IST)
ಮಹಾರಾಷ್ಟ್ರ ಚುನಾವಣೆ ಬಗ್ಗೆ ಭವಿಷ್ಯ ನುಡಿದಿರೋ ಡಿಸಿಎಮ್ ಲಕ್ಷ್ಮಣ ಸವದಿ, ರಾಜ್ಯದ ಸಿಎಂ ಸ್ಥಾನದ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ 200 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಮಹಾರಾಷ್ಟ್ರ ಸಿ ಎಮ್ ದೇವೇಂದ್ರ ಫಡ್ನವೀಸ್ ಉತ್ತಮ ಆಡಳಿತ ಕೊಟ್ಟಿದ್ದಾರೆ.
ಚುನಾವಣೆಯ ಫಲಿತಾಂಶದ ದಿನ ಕೇಸರಿ ಧ್ವಜ ಹಾರಿಸುವದು ಖಚಿತ ಅಂತ ಲಕ್ಷ್ಮಣ ಸವದಿ ಹೇಳಿದ್ದಾರೆ.
ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಪ್ರತ್ಯೇಕ ಉತ್ತರ ಕರ್ನಾಟಕ ಸಿ ಎಮ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅವರು ಒಳಗೊಂದು ಹೊರಗೊಂದು ಮಾತನಾಡುವವರಲ್ಲ.
ಹಾಸ್ಯಭರಿತ ಮಾತುಗಳನ್ನು ಆಡುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದ್ರು.
ಎಲ್ಲರಿಗೂ ಆಸೆ ಇರುತ್ತದೆ. ಯಾರೂ ರಾಜಕೀಯ ಸನ್ಯಾಸಿಗಳಲ್ಲ. ಶಾಸಕರಾದವರು ಸಚಿವರು, ಸಚಿವರಾದವರು ಡಿಸಿಎಮ್ ಮತ್ತು ಡಿಸಿಎಮ್ ಆದವರು ಮುಖ್ಯಮಂತ್ರಿ ಆಗಬೇಕು ಅನ್ನುವ ಆಸೆ ಇರುತ್ತದೆ. ಅವರಿಗೂ ಮುಂದೆ ಅವಕಾಶ ಸಿಗಬಹುದು. ಅವರೆಲ್ಲ ತಮಾಷೆಯಾಗಿ ಮಾತನಾಡುತ್ತಾರೆ.
ನನಗೆ ಯಡಿಯೂರಪ್ಪ ಅವರ ನಾಯಕತ್ವದ ಸ್ಥಾನ ವಹಿಸುವ ಅಥವಾ ಸಿ ಎಮ್ ಆಗುವ ಆಸೆ ಇಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಹೈಕಮಾಂಡ್ ಕೊಡುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದಿದ್ದಾರೆ ಲಕ್ಷ್ಮಣ ಸವದಿ.