ಡಿಸಿಎಂ ಮನೆಗೆ ಮುತ್ತಿಗೆ ಹಾಕಿ ಚಳಿ ಬಿಡಿಸಿದ ಜನರು!

Webdunia
ಶುಕ್ರವಾರ, 25 ಅಕ್ಟೋಬರ್ 2019 (14:43 IST)
ಡಿಸಿಎಂ ಸ್ವಕ್ಷೇತ್ರದ ಜನರು ಉಪಮುಖ್ಯಮಂತ್ರಿ ನಿವಾಸದಲ್ಲಿ ಇರೋವಾಗಲೇ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.

ಶಾಶ್ವತ ಸೂರು ಕಲ್ಪಿಸುವಂತೆ ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮನೆಗೆ ಸಂತ್ರಸ್ತರು  ಮುತ್ತಿಗೆ ಹಾಕಿದ್ರು.

ಬೆಳ್ಳಂಬೆಳಿಗ್ಗೆ ಕಾರಜೋಳ ಅವರ ಮನೆಗೆ  ಸಂತ್ರಸ್ತರು ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ಬಿಸಿ ಮುಟ್ಟಿಸಿ ಚಳಿ ಬಿಡಿಸಿದರು. ಯುಕೆಪಿ ಮಾದರಿಯಲ್ಲಿ  ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಲಾಯಿತು.  ನೆರೆ ಸಂತ್ರಸ್ತರು ಮಳೆಗೆ ನಲುಗಿ ಹೋಗಿದ್ದು, ಸತತ ಮಳೆಯಿಂದಾಗಿ ಮನೆಯಲ್ಲಿ ಜೀವಭಯದಿಂದ ಮಲಗುವ ಪರಿಸ್ಥಿತಿ ಎದುರಾಗಿದೆ.

ಅಲ್ಲದೇ  ಸೂಕ್ತ ಮನೆಯಿಲ್ಲದೇ  ಮಕ್ಕಳು, ವಯೋವೃದ್ಧರ ಸ್ಥಿತಿ ಚಿಂತಾಜನಕವಾಗಿದೆ. ದಿನದಿಂದ ದಿನಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಶೀಘ್ರವೇ    ಸಂತ್ರಸ್ತರಿಗೆ ಸೂಕ್ತ ಹಾಗೂ ಶಾಶ್ವತ ಸ್ಥಳಕ್ಕೆ ಸ್ಥಳಾಂತರ ಮಾಡಿ ಸೂರು ಒದಗಿಸಬೇಕೆಂದು ಮನವಿ ಮಾಡಿದರು.
 ಇದೇ ಸಂದರ್ಭದಲ್ಲಿ ಮಾತನಾಡಿದ ಕಾರಜೋಳ,  ಶೀಘ್ರದಲ್ಲಿಯೇ ನೆರೆ ಸಂತ್ರಸ್ತರನ್ನ ಶಾಶ್ವತ ಸ್ಥಳಕ್ಕೆ ಸ್ಥಳಾಂತರ ಮಾಡಿ ಸೂಕ್ತ ಸೂರನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ಗೆ ಬಿಗ್ ಶಾಕ್ ಕೊಟ್ಟ ಪ್ರಿಯಾಂಕ್ ಖರ್ಗೆ: ನಾನು ಯಾವುದಕ್ಕೂ ಹೆದರಲ್ಲ ಎಂದ ಗೃಹಸಚಿವ

ಬಸ್ ಎಕ್ಸ್ ಪ್ರೆಸ್ ನಂತೆ ಓಡುತ್ತಿದ್ದರೆ ರಸ್ತೆ ನೋಡಬೇಕಾದ ಡ್ರೈವರ್ ಮೊಬೈಲ್ ನಲ್ಲಿ ಮಗ್ನ: ಭಯಾನಕ Video

ಕರ್ತವ್ಯದ ವೇಳೆ ಮೃತಪಟ್ಟ ಎಸ್ಐಆರ್ ಅಧಿಕಾರಿ ಭುವನಾ ಕುಟುಂಬಕ್ಕೆ ಡಿಸಿಎಂ ಭರ್ಜರಿ ಪರಿಹಾರ

ನಗು ನಗುತ್ತಾ ಗಂಡನ ಮನೆಗೆ ಹೋಗಿದ್ದವಳು..ಮದುವೆಯಾದ ಕೆಲವೇ ದಿನಕ್ಕೆ ಸಾವು: ದೆಹಲಿಯ ಆಕೃತಿ ಸಾವಿನ ಹಿಂದೆ ಅನುಮಾನ Video

ಅಯೋಧ್ಯೆ ರಾಮನ ದುಡ್ಡಿಗೆ ಕನ್ನಡ ಹಾಕಿದ 8 ಆರೋಪಿಗಳ ಹಿನ್ನಲೆ ಇಲ್ಲಿದೆ

ಮುಂದಿನ ಸುದ್ದಿ
Show comments