ರುದ್ರಾಕ್ಷಿಪುರ ಸಿನಿಮಾದಲ್ಲಿ ದಾವಣಗೆರೆ ಪ್ರತಿಭೆ

Webdunia
ಭಾನುವಾರ, 28 ಅಕ್ಟೋಬರ್ 2018 (19:21 IST)
ಹಲವು ಧಾರವಾಹಿಗಳಲ್ಲಿ ಮಿಂಚಿದ್ದ ಬೆಣ್ಣೆನಗರಿ ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ವಿಭಿನ್ನ ಕಥಾ ಹಂದರ ಇರುವ  ಸಿನಿಮಾದಲ್ಲಿ ಮಿಂಚುತ್ತಿದ್ದಾನೆ. ಈಶ್ವರ್‍ ಪೊಲಂಕಿ ಅವರು ನಿರ್ದೇಶನ ಮಾಡಿರುವ ಸಿನಿಮಾದಲ್ಲಿ 
ದಾವಣಗೆರೆ ಹುಡುಗ ಅರ್ಜುನ್ ನಾಯಕ ನಟನಾಗಿ ಮಿಂಚಿದ್ದಾನೆ.

ದಾವಣಗೆರೆ ನಗರದ ಸಿದ್ದಗಂಗಾ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿರುವ ಅರ್ಜುನ್, ಶಾಲೆಯಲ್ಲಿದ್ದಾಗ ಸ್ವಯಂ ನಿರ್ದೇಶನ ಮಾಡಿ ನಾಟಕ ಪ್ರದರ್ಶನ ನಡೆಸಿದ್ದರು. ಈ ಮೂಲಕ ಧಾರವಾಹಿ ಕ್ಷೇತಕ್ಕೆ ಕಾಲಿಟ್ಟ ಅರ್ಜುನ್ ಹರಹರ ಮಹದೇವ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿ ಸದ್ಯ ರುದ್ರಾಕ್ಷಿ ಪುರ ಎಂಬ ವಿಭಿನ್ನ ಸಿನಿಮಾದ ನಾಯಕನಾಗಿ ನಟಿಸಿದ್ದಾನೆ. ಇನ್ನೂ ಚಿತ್ರದ ಪ್ರಮೋಶನ್ ಗೆ ಸಿನಿಮಾ ತಂಡ ದಾವಣಗೆರೆಗೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಜನರಿಗೆ ಕೋರಿಕೊಂಡ್ರು.

ವಜ್ರದ ಜಾಡು ಹಿಡಿದ ಕಥಾ ಹಂದರ ವಜ್ರ ಅಮೂಲ್ಯ. ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ, ಅಂಥದ್ದೊಂದು ವಜ್ರವನ್ನು ಹುಡುಕಲು ಹೊರಟವರಿಗೆ ಎದುರಾಗುವ ತೊಂದರೆಗಳನ್ನುವ ‘ರುದ್ರಾಕ್ಷಿಪುರ’ ಸಿನಿಮಾ ಕಥೆಯ ರೂಪದಲ್ಲಿ ಹೇಳುತ್ತದೆ. ಈ ಚಿತ್ರದ ಹೆಸರು ಒಂದು ಊರನ್ನು ಸೂಚಿಸುತ್ತದೆ. ಈ ಊರು ಕಾಲ್ಪನಿಕ. ಈ ಚಿತ್ರದಲ್ಲಿ ನಾಯಕನು ಕಳ್ಳರ ಗುಂಪನ್ನು ಸೇರಿಕೊಳ್ಳುತ್ತಾನೆ. ಆತ ಏಕೆ ಅದನ್ನು ಸೇರಿಕೊಳ್ಳುತ್ತಾನೆ, ನಾಯಕಿಗೂ ವಜ್ರಕ್ಕೂ ಏನು ಸಂಬಂಧ ಎಂಬುದು ಚಿತ್ರದ ಕಥಾ ಹಂದರ. ಗುಬ್ಬಿ, ಬೆಂಗಳೂರು ಮತ್ತು ಉಡುಪಿಯಲ್ಲಿ ಇದರ ಚಿತ್ರೀಕರಣ ನಡೆದಿದೆ ಎಂದು ತಂಡ ಹೇಳಿಕೊಂಡಿದೆ. ದಾವಣಗೆರೆ ಪ್ರತಿಭೆ ಪವನ್ ಪಾರ್ಥ ಅವರು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ಅರ್ಜುನ್‍ ಚೌಹಣ್ ನಾಯಕನಾಗಿದ್ದರೆ, ರೂಪಿಕಾ ನಾಯಕಿ. ರವಿಚೇತನ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ  ಛಾಯಾಗ್ರಹಣ ಸುದೀಪ್‍ ಫ್ರೆಡ್ರಿಕ್. ನಾಗರಾಜ ಮುರ್ಡೇಶ್ವರ ಇದರ ನಿರ್ಮಾಣ ಮಾಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟನೆಲ್ ರೋಡ್ ಹೆಸರಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಬೇಡ: ಶೋಭಾ ಕರಂದ್ಲಾಜೆ ಎಚ್ಚರಿಕೆ

ಬೆಂಗಳೂರು ಸುರಂಗ ರಸ್ತೆ ನೆಪದಲ್ಲಿ ದುಡ್ಡು ಹೊಡೆಯುವ ಸ್ಕೀಮ್: ಆರ್ ಅಶೋಕ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬಿಹಾರ ಚುನಾವಣೆ ನ್ಯಾಯವಾಗಿ ನಡೆದಿಲ್ಲ ಎಂದ ರಾಹುಲ್ ಗಾಂಧಿ: ವಿದೇಶದಲ್ಲಿ ಕೂತು ನೆಪ ಹೇಳ್ತೀರಿ ಎಂದ ನೆಟ್ಟಿಗರು

ರಾಹುಲ್ ಗಾಂಧಿ ಮತಗಳ್ಳತನ ಹೋರಾಟದ ಕತೆ ಏನಾಗಲಿದೆ

ಮುಂದಿನ ಸುದ್ದಿ
Show comments