ಲವರ್ ಜತೆ ಓಡಿಹೋದ ಮಗಳು; ಮೊಮ್ಮಗನನ್ನ ಕೆರೆಗೆ ಹಾಕಿದ ಅಜ್ಜಿ

Webdunia
ಮಂಗಳವಾರ, 24 ಸೆಪ್ಟಂಬರ್ 2019 (16:16 IST)
ಪ್ರಿಯಕರನೊಂದಿಗೆ ಓಡಿಹೋದ ಮಗಳ ಮೇಲಿನ ಸಿಟ್ಟಿನಿಂದಾಗಿ ಮೊಮ್ಮಗನನ್ನು ಕೆರೆಗೆ ತಳ್ಳಿ ದಾರುಣವಾಗಿ ಕೊಲೆ ಮಾಡಿ ಸಾಯಿಸಿದ್ದಾಳೆ ಅಜ್ಜಿ. 

ಮಂಡ್ಯದ ಶೀಳನೆರೆ ಹೋಬಳಿಯ ಮಾರುತಿನಗರದಲ್ಲಿ ವಾಸವಾಗಿದ್ದರು ಸಾವಿತ್ರಮ್ಮ ಹಾಗೂ ಅವರ ಮಗಳು  
ಲಕ್ಷ್ಮಿ. ಅಲ್ಲಿಯೇ ಇರುವ ಸರ್ಕಾರಿ ಶಾಲೆಯಲ್ಲಿ ತಮ್ಮ ಮಗ ಪ್ರಜ್ವಲ್(11)ನನ್ನು ಲಕ್ಷ್ಮಿ ಶಾಲೆಗೆ ದಾಖಲಿಸಿದ್ದರು.

5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು ಪ್ರಜ್ವಲ್,  ತನ್ನ ಮೊಮ್ಮಗ ಪ್ರಜ್ವಲ್ ನನ್ನು ಕಳಿಸಿಕೊಡುವಂತೆ ಮಧ್ಯಾಹ್ನ ಶಾಲೆಗೆ ಹೋಗಿ ಶಾಲಾ ಶಿಕ್ಷಕಿಯಲ್ಲಿ ಮನವಿ ಮಾಡಿದ ಅಜ್ಜಿ, ಹಬ್ಬಕ್ಕೆ ಹೋಗಬೇಕೆಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ತನ್ನ ಜೊತೆಯಿದ್ದ ಮಗಳು ಲಕ್ಷ್ಮಿ ಫೇಸ್ ಬುಕ್ ನಲ್ಲಿ ಪರಿಚಯವಾದ ಪ್ರಿಯಕರನೊಂದಿಗೆ ಓಡಿಹೋಗಿದ್ದಳು.

ಈ ಹಿನ್ನೆಲೆಯಲ್ಲಿ ತನ್ನ ಜೊತೆ ಇದ್ದ ಮೊಮ್ಮಗ ಪ್ರಜ್ವಲ್ ನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿಕೊಂಡು ಸಮೀಪದ ಸಿಂದಘಟ್ಟ ಕೆರೆಗೆ ಮೊಮ್ಮಗನನ್ನು ತಳ್ಳಿದ್ದಾಳೆ. ಆ ಬಳಿಕ ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಲು ಸಿದ್ಧವಾಗುತ್ತಿದ್ದಾಗ ಮಾರುತಿನಗರ ನಿವಾಸಿಗಳು ಹಿಡಿದು ಕೆ.ಆರ್.ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೃತ ಶಾಲಾ ವಿದ್ಯಾರ್ಥಿ ಪ್ರಜ್ವಲ್ ನ ಮೃತದೇಹದ ಪತ್ತೆಗೆ ಸಿಂದಘಟ್ಟ ಕೆರೆಯ ಬಳಿ ಶೋಧನೆ ನಡೆದಿದೆ. 
ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ತನಿಖೆ ಕೈಗೊಂಡಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆ ಟಿಎಂಸಿಗೆ ರಾಜೀನಾಮೆ ನೀಡುತ್ತೇನೆ: ಪಕ್ಷದಿಂದ ಅಮಾನತುಗೊಂಡ ಪಂ.ಬಂಗಾಳ ಶಾಸಕನ ಹೊಸ ನಡೆ

ವಿದೇಶದಿಂದ ಬರುವ ಗಣ್ಯರ ಭೇಟಿಗಿಲ್ಲ ಅವಕಾಶ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಾಸ್ಟರ್ ಸ್ಟ್ರೋಕ್

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ 200ಕ್ಕೂ ಅಧಿಕ ಇಂಡಿಗೋ ವಿಮಾನ ಹಾರಾಟ ರದ್ದು, ಇಲ್ಲಿದೆ ಮಾಹಿತಿ

ನಾವು ಮನೆಗೆ ಟೈಮೇ ಕೊಡಲ್ಲ, ನನ್ನ ಮಕ್ಳು ಮಾಡಿದ ಸಾಧನೆ ನಾನು ಮಾಡಿರಲಿಲ್ಲ: ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments