ಹುಡುಗನ ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಹುಡುಗಿ

ಗುರುವಾರ, 19 ಸೆಪ್ಟಂಬರ್ 2019 (13:56 IST)
ಪ್ರಿಯಕರನೊಬ್ಬ ಹುಡುಗಿ ಜತೆಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಕ್ಕೆ ಮನನೊಂದು ಪ್ರೇಯಸಿಯೊಬ್ಬಳು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ.

ಹುಡುಗನ ಸೆಲ್ಫಿ ಹುಚ್ಚಿಗೆ ಯುವತಿಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಕಾಲೇಜ್ ಒದುತ್ತಿದ್ದಾಗ ಪರಿಚಯವಾಗಿದ್ದ ಶಿವಾನಂದ್ ಎಂಬಾತನನ್ನ ಸುಧಾರಾಣಿ ಪರಿಚಯ ಮಾಡಿಕೊಂಡಿದ್ದಳು. ಪರಿಚಯ ಲವ್ವಿ ಡವ್ವಿ ತಿರುಗಿತ್ತು.

ಹೀಗಾಗಿ ಪಾರ್ಕು ಅಂತೆಲ್ಲಾ ಸುತ್ತಾಡಿದ ಜೋಡಿ ಫೋಟೊಗಳನ್ನು ಯುವಕ ಆಗಾಗ ಸೆಲ್ಫಿ ಮಾಡಿಕೊಂಡಿದ್ದನು.

ಆದರೆ ಶಿವಾನಂದನು ತನ್ನ ಗೆಳತಿ ಸುಧಾರಾಣಿ ಜತೆಗಿರೋ ಫೋಟೋವನ್ನು ಪೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ಮನನೊಂದ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ಸುಧಾರಾಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೆರೂಟಗಿ ಗ್ರಾಮದ ಶಿವಾನಂದನ ವಿರುದ್ಧ ಮೃತ ಸುಧಾರಾಣಿ ಪೋಷಕರು ದೂರು ದಾಖಲು ಮಾಡಿದ್ದು, ವಿಜಯಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಪಾಕ್