Webdunia - Bharat's app for daily news and videos

Install App

Darshan Thoogudeepa: ದರ್ಶನ್ ಗಿಲ್ಲ ಮನೆ ಊಟ: ಯಾವ ಸಂದರ್ಭದಲ್ಲಿ ಆರೋಪಿಗಳಿಗೆ ಮನೆ ಊಟಕ್ಕೆ ಕೋರ್ಟ್ ಅವಕಾಶ ನೀಡುತ್ತದೆ

Krishnaveni K
ಗುರುವಾರ, 25 ಜುಲೈ 2024 (16:07 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿದ್ದು, ಜೈಲೂಟವನ್ನೇ ತಿನ್ನುವಂತೆ ಆದೇಶಿಸಿದೆ. ಸಾಮಾನ್ಯವಾಗಿ ಆರೋಪಿಯು ಯಾವ ಸಂದರ್ಭದಲ್ಲಿ ಮನೆ ಊಟಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಕೋರ್ಟ್ ಯಾವಾಗ ಅನುಮತಿ ನೀಡುತ್ತದೆ ನೋಡಿ.

ಸಾಮಾನ್ಯವಾಗಿ ಜೈಲಿನಲ್ಲಿ ಲೆಕ್ಕಾಚಾರದ ಪ್ರಮಾಣದಲ್ಲೇ ಊಟ ನೀಡಲಾಗುತ್ತದೆ. ಅದೂ ಜೈಲಿನಲ್ಲೇ ತಯಾರಿಸಲಾಗುವ ಊಟವನ್ನೇ ಎಲ್ಲರಿಗೂ ನೀಡಲಾಗುತ್ತದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಐಪಿಗಳಿಗೆ ಮಾತ್ರ ಜೈಲು ಕೊಠಡಿಗೆ ಊಟ ತಂದುಕೊಡುತ್ತಾರೆ. ಉಳಿದವರು ತಳ್ಳು ಗಾಡಿಯಲ್ಲಿ ಸೆಲ್ ಹತ್ತಿರ ಊಟ ಬರುವಾಗ ತೆಗೆದುಕೊಳ್ಳಬೇಕಾಗುತ್ತದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಕೈದಿ ಸಿದ್ದರೂಢ ಹೇಳಿದ್ದರು.

ಸಾಮಾನ್ಯವಾಗಿ ಒಬ್ಬ ಕೈದಿ ಜೈಲಿನ ಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಒಬ್ಬ ಕೈದಿಗೆ ಗಂಭೀರ ಖಾಯಿಲೆ ಇದ್ದಾಗ ಅಥವಾ ಪಥ್ಯಾಹಾರದ ಅಗತ್ಯವಿದ್ದಾಗ ಆತನ ಪ್ರಾಣಕ್ಕೆ ಸಮಸ್ಯೆಯಾಗಬಹುದೆಂದರೆ ಮನೆ ಊಟಕ್ಕೆ ಮನವಿ ಸಲ್ಲಿಸಬಹುದು. ಜೈಲಿನಲ್ಲಿ ಊಟ ತಿಂದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಾದಾಗಲೆಲ್ಲಾ ಮನೆ ಆಹಾರಕ್ಕೆ ಅವಕಾಶ ಕೊಡುವುದಿಲ್ಲ.

ಈ ಹಿಂದೆ ಛಾಪಾ ಹಗರಣದ ರೂವಾರಿ ಕರೀಂ ಲಾಲ್ ತೆಲಗಿಗೆ ಮನೆ ಊಟಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಯಾಕೆಂದರೆ ಆತನಿಗೆ ಗಂಭೀರ ಖಾಯಿಲೆ ಇತ್ತು ಎಂಬ ಕಾರಣಕ್ಕೆ ಮಾತ್ರ. ಅದರಲ್ಲೂ ಕೊಲೆ ಆರೋಪದಲ್ಲಿ ಜೈಲು ಸೇರಿದವರಿಗೆ ಮನೆ ಊಟದ ಸೌಲಭ್ಯಕ್ಕೆ ಕೋರ್ಟ್ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಒಪ್ಪಬಹುದಾದ ಕಾರಣ ನೀಡಿದರೆ ಮಾತ್ರ ಮನೆ ಊಟಕ್ಕೆ ಕೋರ್ಟ್ ಅನುಮತಿ ನೀಡಬಹುದಾಗಿದೆ. ಒಂದು ವೇಳೆ ಮನೆ ಊಟಕ್ಕೆ ಅನುಮತಿ ನೀಡಿದರೂ ಹೊಟ್ಟೆ ತುಂಬಾ ಬಾಡೂಟ ತಂದುಕೊಡಲು ಅವಕಾಶವಿಲ್ಲ. ಜೈಲಿನ ನಿಯಮಗಳಿಗೆ ಅನುಸಾರವಾಗಿ ಇಂತಿಷ್ಟೇ ಪ್ರಮಾಣದ ಹೆಚ್ಚು ಕೊಬ್ಬಿನಂಶಗಳಿಲ್ಲದ ಸಾದಾ ಆಹಾರವನ್ನಷ್ಟೇ ಕೊಡಬಹುದಾಗಿದೆ. ಆದರೆ ಸದ್ಯಕ್ಕೆ ದರ್ಶನ್ ಕೊಲೆ ಆರೋಪಿಯಾಗಿರುವುದರಿಂದ ಅವರಿಗೆ ಆ ಸೌಲಭ್ಯವನ್ನು ನೀಡಲಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments