ಅಮ್ಮ ಏನೇ ನಿರ್ಧಾರ ಮಾಡಿದರೂ ಜೊತೆಗಿರುತ್ತೇನೆ ಪ್ರಾಮಿಸ್ ಮಾಡಿದ ದರ್ಶನ್

Krishnaveni K
ಬುಧವಾರ, 3 ಏಪ್ರಿಲ್ 2024 (12:36 IST)
ಮಂಡ್ಯ: ಸುಮಲತಾ ಅಂಬರೀಶ್ ಜೊತೆಗೆ ಮಂಡ್ಯದಲ್ಲಿ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಮ್ಮ ಏನೇ ನಿರ್ಧಾರ ತೆಗೆದುಕೊಂಡರೂ ಜೊತೆಯಾಗಿರುತ್ತೇನೆ ಎಂದಿದ್ದಾರೆ.

ಪುತ್ರ ಅಭಿಷೇಕ್ ಅಂಬರೀಶ್ ಮತ್ತು ದರ್ಶನ್ ಜೊತೆಗೆ ಇಂದು ಮಂಡ್ಯದಲ್ಲಿ ಸುಮಲತಾ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ. ಇದಕ್ಕೆ ಮೊದಲು ಕಾಳಿಕಾಂಬ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪೂಜೆ ವೇಳೆ ದರ್ಶನ್, ಅಭಿಷೇಕ್ ಕೂಡಾ ಸಂಕಲ್ಪ ಮಾಡಿದರು.

ಅದಾದ ಬಳಿಕ ಸಭೆಗೆ ಬಂದ ಸುಮಲತಾ ಜೊತೆಗೆ ವೇದಿಕೆಯಲ್ಲಿ ದರ್ಶನ್ ಮತ್ತು ಅಭಿಷೇಕ್ ಕೂಡಾ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಷಣಕ್ಕೆ ಮೊದಲು ಸುಮಲತಾ ಇಷ್ಟು ದಿನ ಸಂಸದೆಯಾಗಿ ಮಾಡಿದ ಕೆಲಸಗಳ ಬಗ್ಗೆ ವಿಡಿಯೋ ಮೂಲಕ ವಿವರಣೆ ನೀಡಲಾಯಿತು. ಬಳಿಕ ದರ್ಶನ್ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.

ಈ ವೇಳೆ ಮಾತನಾಡಿದ ದರ್ಶನ್, ಇಷ್ಟು ದಿನ ಅಮ್ಮ ಮಾಡಿದ ಕೆಲಸಗಳನ್ನು ನೀವು ನೋಡಿದ್ದೀರಿ. ನಾನು ರಾಜಕೀಯ ಮಾತನಾಡಲು ಹೋಗಲ್ಲ. ಅಮ್ಮ ಏನೇ ನಿರ್ಧಾರ ಮಾಡಿದರೂ ಅವರ ಜೊತೆಗೆ ನಾನಿರುತ್ತೇನೆ. ಇಷ್ಟು ದಿನ ಮಂಡ್ಯದ ಜನ ನಮ್ಮ ಮೇಲೆ ಪ್ರೀತಿ ತೋರಿದ್ದೀರಿ. ಮುಂದೆಯೂ ಹೀಗೇ ಮುಂದುವರಿಯಲಿ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಿಯಾ ಗಾಂಧಿಗೆ ಪೌರತ್ವ ಸಿಗುವ ಮೊದಲು ವೋಟ್ ಹಾಕಿದ್ದಕ್ಕೆ ಕೋರ್ಟ್ ನೋಟಿಸ್

ಮಹಿಳೆಯರಿಗೆ ಋತುಚಕ್ರದ ರಜೆ ನೀಡಿದ್ದ ಸರ್ಕಾರಕ್ಕೆ ಶಾಕ್ ನೀಡಿದ ಹೈಕೋರ್ಟ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಕುರಾನ್, ಬೈಬಲ್ ಬಗ್ಗೆ ಇಂತಹ ಹೇಳಿಕೆ ನೀಡಲಿ: ಕೆಎಸ್ ಈಶ್ವರಪ್ಪ

ಮುಂದಿನ ಸುದ್ದಿ
Show comments