Webdunia - Bharat's app for daily news and videos

Install App

ಬೆಂಗಳೂರು ಫುಟ್ ಬಾಲ್ ಕ್ಲಬ್ ಬಿಎಫ್ ಸಿ ಮಾಡಿರುವ ಪೋಸ್ಟರ್ ವಿರುದ್ಧ ದರ್ಶನ್ ಫ್ಯಾನ್ಸ್ ಗರಂ

Webdunia
ಗುರುವಾರ, 8 ಸೆಪ್ಟಂಬರ್ 2022 (16:27 IST)
ಸೋಶಿಯಲ್ ಮೀಡಿಯಾದಲ್ಲಿ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್ ಒಂದು ಇದೀಗ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ವಿಶೇಷವಾಗಿ ಎಡಿಟ್ ಮಾಡಿರುವ ಚಿತ್ರವೊಂದನ್ನು ಬೆಂಗಳೂರು ಎಫ್ ಸಿ ತನ್ನ ಅಧಿಕೃತ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದೆ. ರಕ್ಷಿತ್ ಶೆಟ್ಟಿ, ಯಶ್ ಹಾಗೂ ಸುದೀಪ್ ಅವರ ಫೋಟೊಗಳನ್ನು ಬಳಸಿ ಬೆಂಗಳೂರು ಫುಟ್‌ಬಾಲ್ ತಂಡದ ಜರ‍್ಸಿ ತೊಡಿಸಿ ಎಡಿಟ್ ಮಾಡಲಾದ ಚಿತ್ರ ಇದಾಗಿದೆ. 'ಅವರಂತೆ ಯಾರೂ ಇಲ್ಲ' ಎಂದೂ ಸಹ ಚಿತ್ರದಲ್ಲಿ ಬರೆಯಲಾಗಿದೆ.
 
ಹೀಗೆ ಎಡಿಟ್ ಮಾಡಲಾಗಿರುವ ಫೋಟೊವನ್ನು ಅಪ್‌ಲೋಡ್ ಮಾಡಿರುವ ಬೆಂಗಳೂರು ಎಫ್ ಸಿ "ಕಿಚ್ಚ ಸುದೀಪ್, ಯಶ್, ರಕ್ಷಿತ್ ಶೆಟ್ಟಿ ಅಂತೆ ಯಾರೂ ಇಲ್ಲ!' ಎಂದು ಕ್ಯಾಪ್ಷನ್ ಬರೆದುಕೊಂಡಿದೆ. ಇನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಈ ಪೋಸ್ಟ್ ನೋಡಿದ ಈ ಮೂವರು ನಟರ ಅಭಿಮಾನಿಗಳು ಸಂತಸದಿಂದ ಲೈಕ್ ಬಟನ್ ಒತ್ತಿದ್ದರೆ, ರ‍್ಶನ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಎಲ್ಲಾ ಸರಿ ಆದರೆ ಈ ಚಿತ್ರದಲ್ಲಿ ನಮ್ಮ ಡಿ ಬಾಸ್ ಚಿತ್ರವನ್ನು ಏಕೆ ಹಾಕಿಲ್ಲ" ಎಂದು ಕಾಮೆಂಟ್ ಮಾಡಿ ಕೋಪಗೊಂಡಿದ್ದಾರೆ.
 
ಹೀಗೆ ಬೆಂಗಳೂರು ಎಫ್‌ಸಿ ಮಾಡಿರುವ ಟ್ವೀಟ್‌ನಲ್ಲಿದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡಲು ಆರಂಭಿಸುತ್ತಿದ್ದಂತೆ ಫ್ಯಾನ್ ವಾರ್ ಆರಂಭಗೊಂಡಿದೆ. ಕೂಡಲೇ ಈ ಪೋಸ್ಟ್ ಡಿಲಿಟ್ ಮಾಡಿ ಎಂದು ದರ್ಶನ್ ಫ್ಯಾನ್ಸ್ ಕಾಮೆಂಟ್ ಮಾಡಿದ್ದರೆ, ಯಶ್ ಹಾಗೂ ಸುದೀಪ್ ಅಭಿಮಾನಿಗಳು ಪೋಸ್ಟ್ ಸರಿಯಾಗಿಯೇ ಇದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
 
ಅವರಂತೆ ಯಾರೂ ಇಲ್ಲ; ಯಾಕೆ ದರ್ಶನ್ ಇಲ್ವಾ? "ಈ ರೀತಿ ಪೋಸ್ಟ್‌ಗಳನ್ನು ಮಾಡುವುದರಿಂದಲೇ ಫ್ಯಾನ್ ವಾರ್ ಶುರುವಾಗುವುದು ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಇಂಥ ಪೋಸ್ಟ್‌ಗಳನ್ನು ಮಾಡುವಾಗ ಸರಿಯಾದ ಕ್ಯಾಪ್ಷನ್ ಬಳಸಿ ಎಂದಿದ್ದಾರೆ. ಅವರಂತೆ ಯಾರೂ ಇಲ್ಲ ಎಂದು ಹೊಗಳುವ ಭರದಲ್ಲಿ ಬೇರೆ ನಟರ ಅಭಿಮಾನಿಗಳಲ್ಲಿ ಬೇಸರ ಮೂಡುವಂತೆ ಮಾಡಬೇಡಿ, ಯಾಕೆ ಅವರಂತೆ ದರ್ಶನ್ ಇಲ್ವಾ" ಎಂದು ಕಾಮೆಂಟ್ ಮಾಡಿ ಕಿಡಿ ಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments