Select Your Language

Notifications

webdunia
webdunia
webdunia
webdunia

ಅಕ್ರಮದಲ್ಲಿ ಅಪ್ಪ-ಮಗ ಜೈಲುಪಾಲು

ಅಕ್ರಮದಲ್ಲಿ ಅಪ್ಪ-ಮಗ ಜೈಲುಪಾಲು
bangalore , ಮಂಗಳವಾರ, 3 ಮೇ 2022 (20:09 IST)
CID ವಿಚಾರಣೆ ವೇಳೆ PSI ನೇಮಕಾತಿ ಅಕ್ರಮದ ಒಂದೊಂದೇ ಸತ್ಯ ಬಯಲಾಗುತ್ತಿದೆ. ಅಕ್ರಮವಾಗಿ ಪರೀಕ್ಷೆ ಬರೆದು ಪಾಸಾಗಿದ್ದ ಪ್ರಭುನನ್ನು ಕಲಬುರಗಿಯಲ್ಲಿ ಸಿಐಡಿ ಅಧಿಕಾರಿಗಳು ನಿನ್ನೆ ಬಂಧಿಸಿದ್ದರು. ಮಗ PSI ಆಗಲಿ ಎನ್ನುವ ಕನಸ್ಸು ಕಂಡಿದ್ದ ಪ್ರಭು ತಂದೆ ಶರಣಪ್ಪ ಲಂಚ ನೀಡಿಯಾದರು ಪಿಎಸ್ಐ ಮಾಡಲು ನಿರ್ಧರಿಸಿದ್ದಾರೆ. ಸೈಟ್​ ಮಾರಿ 50 ಲಕ್ಷ ರೂಪಾಯಿಯನ್ನು ಮಧ್ಯವರ್ತಿ ಚಂದ್ರಕಾಂತ್ ಕುಲಕರ್ಣಿಗೆ ಲಂಚವಾಗಿ ನೀಡಿದ್ದನು. ಈ ಸತ್ಯವನ್ನ ಸಿಐಡಿ ಅಧಿಕಾರಿಗಳು ಬೇಧಿಸಿದ್ದು, ಮಗ ಸೇರಿದಂತೆ ತಂದೆಯನ್ನು ಸಿಐಡಿ ಅಧಿಕಾರಿಗಳು  ಬಂಧಿಸಿದ್ದಾರೆ. ಇತ್ತ ನಿವೇಶನವೂ ಹೋಯ್ತು.. ಹಣವೂ ವಂಚಕರ ಪಾಲಾಯ್ತು. ಅಪ್ಪ ಮಗ ಸಿಐಡಿ ಅಧಿಕಾರಿಗಳಿಗೆ ಅತಿಥಿಯಾಗಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಸವಾರನ ಬರ್ಬರ ಹತ್ಯೆ